main logo

ಬಾಣಂತಿ ಹೆಂಡತಿಯನ್ನೇ ಕೊಂದ ಪಾಪಿ ಪತಿ

ಬಾಣಂತಿ ಹೆಂಡತಿಯನ್ನೇ ಕೊಂದ ಪಾಪಿ ಪತಿ

ಬೆಂಗಳೂರು: ಹೊಸಕೋಟೆಯಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ತನ್ನ ಹೆಂಡತಿಯ ಶೀಲವನ್ನು ಶಂಕಿಸಿದ ಪೊಲೀಸ್ ಪೇದೆಯೊಬ್ಬ ಸಿಟ್ಟಿನಲ್ಲಿ ಬಾಣಂತಿ ಹೆಂಡತಿಯನ್ನೇ ಕೊಂದು ತಾನು ವಿಷ ಕುಡಿದಿರುವ ಘಟನೆ ನಡೆದಿದೆ.

ಪ್ರತಿಭಾ (24) ಪ್ರಾಣ ಕಳೆದುಕೊಂಡ ದುರ್ದೈವಿ, 11 ದಿನಗಳ ಹಿಂದೆ ಹೊಸಕೋಟೆ ಸಮೀಪದ ಕಳತ್ತೂರು ಗ್ರಾಮದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಚಾಮರಾಜನಗರದ ರಾಮಸಮುದ್ರದ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕಿಶೋರ್ ಡಿ (32) ಕ್ರಿಮಿನಾಶಕ ಸೇವಿಸಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.

ಮದುವೆಯಾದ ಒಂದು ವರ್ಷದಲ್ಲೇ ಇವರಿಬ್ಬರ ನಡುವೆ ಹಲವು ಬಾರಿ ಗಲಾಟೆ ನಡೆದಿತ್ತು. ಕುಟುಂಬಸ್ಥರು ಇಬ್ಬರಿಗೂ ಹಲವು ಸಲ ಬುದ್ದಿ ಹೇಳಿದ್ದರು. 11 ದಿನಗಳ ಹಿಂದಷ್ಟೇ ಪ್ರತಿಭಾಗೆ ಮಗುವಾಗಿತ್ತು. ಹೀಗಾಗಿ ಬಾಣಂತನಕ್ಕೆ ತಂದೆ ಮನೆಗೆ ಬಂದಿದ್ದರು.

ಮಗು ನೋಡುವ ನೆಪದಲ್ಲಿ ಮಾವನ ಮನೆಗೆ ಬಂದವ ಮನೆಯಲ್ಲಿ ಪತ್ನಿ ಒಬ್ಬಳೆ ಇದ್ದ‌ ವೇಳೆ‌ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಫ್ಯಾನಿಗೆ ಸೀರೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಮೃತ ಪ್ರತಿಭಾ ಪೋಷಕರು ಮನೆಗೆ ಬಂದಿದ್ದರಿಂದ ಬೆಚ್ಚಿಬಿದ್ದ ಕಿಶೋರ್ ಅಲ್ಲಿಂದ ಪರಾರಿಯಾಗಿದ್ದಾನೆನ್ನಲಾಗಿದೆ.

ಕೀಟನಾಶಕ ಸೇವಿಸಿರುವ ಕಿಶೋರ್ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯದ್ದು, ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕಿಶೋರ್ ನನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!