ನಾರಾವಿ, ಅ.22: ವಿ ಚರ್ಚ್ ರೋಡ್ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಪಾದಚಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.
ಓಡಿಲ್ವಾಳ ಗ್ರಾಮದ ಕಟ್ಟದಬೈಲು ಮನೆಯ ಮಹೇಶ್ ಮೃತಪಟ್ಟವರು. ಅ.21ರಂದು ರಾತ್ರಿ 10.50ರ ಸುಮಾರಿಗೆ ನಾರಾವಿ ಚರ್ಚ್ ರೋಡ್ ಬಳಿ ಮಹೇಶ್, ಬಬಿತಾ ಹಾಗೂ ಸುಧಾಕರ ಪೂಜಾರಿ ನಡೆದುಕೊಂಡ ಹೋಗುತ್ತಿದ್ದರು. ಈ ವೇಳೆ ನಾರಾವಿ ಕಡೆಗೆ ಸಾಗುತ್ತಿದ್ದ ಕಾರು ವಿರುದ್ಧ ದಿಕ್ಕಿನಿಂದ ಬಂದು ಬಬಿತಾ ಅವರಿಗೆ ತಾಗಿ ಮಹೇಶ್ ಅವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದ ಅವರು ಗಂಭೀರ ಗಾಯಗೊಂಡರು, ಅಪಘಾತದಿಂದ ಪ್ರಜ್ಞೆ ಕಳೆದುಕೊಂಡ ಅವರನ್ನು ತತ್‌ಕ್ಷಣ ಕಾರ್ಕಳ ಆಸ್ಪತ್ರೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಮಧ್ಯರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು, ಈ ಸಂಬಂಧ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.