ಕುಂದಾಪುರ: ಕುಂದಾಪುರ ತಾಲೂಕಿನ ಕೆದೂರು ಗ್ರಾಪಂ ಮಲ್ಯಾಡಿ ಗ್ರಾಮದ ನಿವಾಸಿ ದಿನಕರ ಶೆಟ್ಟಿ (46) ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ತೆಕ್ಕಟ್ಟೆ ಸಮೀಪದ ಹಳ್ಳಿಮನೆ ಹೋಟೆಲ್‌ನಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿನಕರ ಶೆಟ್ಟಿ ಎಂದಿನಂತೆ ಕೆಲಸ ಮುಗಿಸಿ ತನ್ನ ದ್ವಿಚಕ್ರ ವಾಹನದ ಮೂಲಕ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮನೆಯ ಅನತಿ ದೂರದಲ್ಲಿರುವ ದೇವರ ಕೆರೆಗೆ ವಾಹನ ಸಮೇತ ಆಕಸ್ಮಿಕವಾಗಿ ಬಿದ್ದಿದ್ದಾರೆ.
ತನ್ನ ಪತಿ ತಡರಾತ್ರಿಯಾದರೂ ಮನೆಗೆ ಬರದ ಕಾರಣ ಪತ್ನಿ ಶೀಲಾ ಶೆಟ್ಟಿ ನೆರೆಮನೆಯವರಿಗೆ ವಿಷಯ ತಿಳಿಸಿ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ