Site icon newsroomkannada.com

ವಳಚ್ಚಿಲ್‌ ಪದವು: ಪೇಟಿಂಗ್‌ ಮಾಡುವಾಗ ವಿದ್ಯುತ್‌ ಶಾಕ್‌ ವ್ಯಕ್ತಿ ಸಾವು

ಮಂಗಳೂರು: ಏಣಿ ಮೂಲಕ ವಿದ್ಯುತ್‌ ಪ್ರವಹಿಸಿ ಕಾರ್ಮಿಕ ಮೃತಪಟ್ಟ ಘಟನೆ ಅಳಪೆ ಗ್ರಾಮದ ಶಿಲ್ಪ ಪಡ್ಪುವಿನಲ್ಲಿ ನಡೆದಿದೆ. ವಳಚ್ಚಿಲ್‌ ಪದವು ನಿವಾಸಿ ಜೈನುದ್ದಿನ್‌ ಅಬ್ದುಲ್‌ ರೆಹಮಾನ್‌(43) ಮೃತಪಟ್ಟವರು.
ಹೆನ್ರಿ ಡಿಸೋಜ ಎಂಬುವರ ಮನೆಯಲ್ಲಿ ಮೇಲ್ಛಾವಣಿ ಬಳಿ ಕಬ್ಬಿಣದ ಏಣಿ ಮೇಲೆ ನಿಂತು ಪೇಂಟಿಂಗ್‌ ಕೆಲಸ ಮಾಡುವಾಗ ಪಕ್ಕದಲ್ಲಿದ್ದ ಹೈಟೆನ್ಷನ್‌ ವೈರ್‌ ತಾಗಿ ವಿದ್ಯುತ್‌ ಪ್ರವಹಿಸಿ ಕೆಳಗೆ ಕುಸಿದುಬಿದ್ದರು. ಅವರೊಂದಿಗೆ ಕೆಲಸ ಮಾಡುತ್ತಿದ್ದ ರಾಜೇಶ್‌ ಮತ್ತು ಬಾಲಕೃಷ್ಣ ಅವರು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮೃತ ರೆಹಮಾನ್‌ ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

Exit mobile version