ಕುಂದಾಪುರ: ಗಿಳಿಯಾರು ಸಮೀಪದ ಹಾರ್ದೊಟ್ಟು ನಿವಾಸಿ ಜಿ. ಸುರೇಂದ್ರ (70) ಅವರು ಕೋಟೇಶ್ವರದ ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನ.5 ರಂದು ಸಂಭವಿಸಿದೆ.
ಸುರೇಂದ್ರ ಅವರು ಯಾವುದೋ ಕಾರಣಕ್ಕೆ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಕೋಟೇಶ್ವರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದು, ಬಳಿಕ ಅಲ್ಲಿಂದ ಸುರೇಂದ್ರ ಅವರು ನಾಪತ್ತೆಯಾಗಿದ್ದರು. ಮನೆಯವರು ಇವರನ್ನು ಎಲ್ಲ ಕಡೆ ಹುಡುಕಾಡಿದ್ದು, ಬಳಿಕ ಕೋಟೇಶ್ವರದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಮೃತ ಸುರೇಂದ್ರ ಅವರ ಪುತ್ರ ಪ್ರಸನ್ನ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ