Site icon newsroomkannada.com

ಯುವತಿ ಜೊತೆ ಅಸಭ್ಯ ವರ್ತನೆ: ಪ್ರಶ್ನಿಸಿದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರಿನಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ನಾದಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾಮುಕ ವ್ಯಕ್ತಿಯೋರ್ವ ಆಕೆಯ ಬಾವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾನೆ.

ಮಹೇಶ್ ಹಲ್ಲೆಗೊಳಗಾಗಿರುವ ವ್ಯಕ್ತಿ. ಸಂದೇಶ್ ಹಲ್ಲೆ ನಡೆಸಿರುವ ಕಾಮುಕ ಅಂಬುಲೆನ್ಸ್ ಡ್ರೈವರ್. ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಟ್ರಾಮಾ ಸೆಂಟರ್‌ನ ಆಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡ್ತಿರೋ ಕಾಮುಕ ಡ್ರೈವರ್ ಸಂದೇಶ್, ಅದೇ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಆಗಿರುವ ಮಹೇಶ್. ಹೆಣ್ಣುಪೀಡಕನಾಗಿರುವ ಸಂದೇಶ್ ಮಹಿಳೆಯರು, ಸಿಬ್ಬಂದಿ ಜೊತೆಗೆ ಅಶ್ಲೀಲವಾಗಿ ವರ್ತಿಸುವುದು ಚಟವಾಗಿಸಿಕೊಂಡಿದ್ದ.

ಈ ಹಿಂದೆ ಮಹಿಳೆಯರ ಶೌಚಾಲಯದಲ್ಲಿ ಹಿಡೆನ್ ಕ್ಯಾಮೆರಾ ಇಟ್ಟು ಆಸ್ಪತ್ರೆಗೆ ಬರುವ ಮಹಿಳೆಯರು, ನರ್ಸ್ ವಿಡಿಯೋ ಮಾಡಿ ಸಿಕ್ಕಿಬಿದ್ದಿದ್ದ ಕಾಮುಕ. ಈ ವಿಚಾರಕ್ಕೆ ಕೆಆರ್ ಆಸ್ಪತ್ರೆಯಿಂದ ಸಂದೇಶ್ ನನ್ನು ಕೆಲಸದಿಂದ ತೆಗೆಯಲಾಗಿತ್ತು. ಆದರೆ ಕೆಲ ದಿನಗಳ ಬಳಿಕ ಮತ್ತೆ ಅದೇ ಆಸ್ಪತ್ರೆಗೆ ವಕ್ಕರಿಸಿ ಟ್ರಾಮಾ ಸೆಂಟರ್ ಗೆ ಆಂಬುಲೆನ್ಸ್ ಡ್ರೈವರ್ ಆಗಿ ಕೆಲಸಕ್ಕೆ ಸೇರಿದವನು ಹಳೇ ಚಾಳಿ ಮುಂದುವರಿಸಿದ್ದ. ಅದೇ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಆಗಿರುವ ಮಹೇಶ ಎಂಬಾತನ ನಾದಿನಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದ ಸಂದೇಶ್. ಇದನ್ನು ಪ್ರಶ್ನಿಸಿ ವಾಗ್ವಾದ ನಡೆಸಿದ್ದ ಮಹೇಶ್ ಜೊತೆಗೆ ಅವನ ವರ್ತನೆ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಗೆ ದೂರು ನೀಡಿದ್ದರು.

Exit mobile version