Site icon newsroomkannada.com

ವ್ಯಕ್ತಿಯ ಮೇಲೆ ಸ್ಕಾರ್ಪಿಯೊ ಹತ್ತಿಸಿ, ಹತ್ಯೆ: ಏನಿದು ಪೈಶಾಚಿಕ ಕೃತ್ಯ?

Man attacked with Scorpio, killed: What is a diabolical act?

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪೈಶಾಚಿಕ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ರಾತ್ರಿ ಕತ್ತಲಲ್ಲಿ ಉದ್ದೇಶಪೂರ್ವಕವಾಗಿ ಸ್ಪೋರ್ಟ್ಸ್​​​ ಕಾರನ್ನು (Scorpio SUV) ಮೋಟಾರು ಸೈಕಲ್ ಸವಾರನ ಮೇಲೆ ಹತ್ತಿಸಿ, ಆತನನ್ನು ನೆಲಕ್ಕೆ ಬೀಳಿಸಿ, ಮತ್ತೆ ಆತನ ಮೇಲೆ ಕಾರು ಹತ್ತಿಸಿ ಕೊಲೆ (Murder) ಮಾಡಲಾಗಿದೆ. ಈ ಹತ್ಯೆ ಆರೋಪದ ಮೇಲೆ ಬೆಂಗಳೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ದಾರುಣ ಘಟನೆ ಪುಲಿಕೇಶಿ ನಗರದಲ್ಲಿ (Pulikeshi Nagar in Bengaluru) ನಡೆದಿದ್ದು, ಅಕ್ಟೋಬರ್ 18 ರ ಮಧ್ಯರಾತ್ರಿ 12:30 ರ ಸುಮಾರಿಗೆ ಸಂಭವಿಸಿದೆ ಎಂದು oneindia.com ವರದಿ ಮಾಡಿದೆ. ದಾಖಲಾರ್ಹ ಸಂಗತಿಯೆಂದರೆ ಇಡೀ ವೃತ್ತಾಂತವನ್ನು ದಾರಿಹೋಕರು ಮೊಬೈಲ್​​ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಆರೋಪಿಯೊಬ್ಬ ಸ್ಕಾರ್ಪಿಯೊ ಎಸ್‌ಯುವಿ ಚಲಾಯಿಸುತ್ತಾ ವ್ಯಕ್ತಿಯನ್ನು ಹಿಂಬಾಲಿಸಿ ಹೊಡೆದು ಉರುಳಿಸಿದ್ದಾನೆ. ಇದೆಲ್ಲಾ ವೀಡಿಯೊದಲ್ಲಿ ದಾಖಲಾಗಿದ್ದು, ಅದರಲ್ಲಿ ಬಲಿಯಾದ ವ್ಯಕ್ತಿಯನ್ನು ಅಸ್ಗರ್ ಎಂದು ಗುರುತಿಸಲಾಗಿದೆ. ಆತ ರಸ್ತೆಯ ಉದ್ದಗಲಕ್ಕೂ ತನ್ನ ಪ್ರಾಣಕ್ಕಾಗಿ ಹತಾಶವಾಗಿ ಓಡುವುದನ್ನು ಕಾಣಬಹುದು. ವಿಷಾದನೀಯ ಸಂಗತಿಯೆಂದರೆ, ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಆಗಿದ್ದ ಅಸ್ಗರ್ ನನ್ನು ಪಟ್ಟುಬಿಡದೆ ಹಂತಕ ಪಡೆ ಆತನನ್ನು ನಡು ರಸ್ತೆಯಲ್ಲಿ ರಾತ್ರಿಗತ್ತಲಲ್ಲಿ ದಾರುಣವಾಗಿ ಸಾಯಿಸಿದೆ. ವರದಿಗಳ ಪ್ರಕಾರ, ಈ ಪ್ರಕರಣದ ಪ್ರಾಥಮಿಕ ಶಂಕಿತನನ್ನು ಅಮರೀನ್ ಎಂದು ಗುರುತಿಸಲಾಗಿದೆ.

ಈ ಭೀಕರ ಘಟನೆಗೆ ಮೂಲ ಕಾರಣ ಆರೋಪಿಗಳಾದ ಅಮರೀನ್ ಮತ್ತು ಅಸ್ಗರ್ ನಡುವಿನ ಹಣಕಾಸಿನ ವಿವಾದ. ಅಮರೀನ್ ಅವರು ಅಸ್ಗರ್ ಅವರಿಂದ ವಾಹನವನ್ನು ಪಡೆದಿದ್ದರು. ಆದರೆ 4 ಲಕ್ಷ ರೂಪಾಯಿ ಸಾಲವನ್ನು ವಾಪಸ್​ ಕೊಡಲು ಸಾಧ್ಯವಾಗಿರಲಿಲ್ಲ ಎಂದು ವರದಿಯಾಗಿದೆ.

ಈ ಬಗೆಹರಿಯದ ಹಣಕಾಸಿನ ವಿಷಯವು ಅಂತಿಮವಾಗಿ ಹಿಂಸಾತ್ಮಕ ರೂಪಕ್ಕೆ ತಿರುಗಿ ಅಸ್ಗರ್‌ನ ಜೀವನವನ್ನು ಬಲಿ ತೆಗೆದುಕೊಂಡಿದೆ. ಇದರಿಂದಾಗಿ ಅಮ್ರೀನ್ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದ್ದು, ಇದೀಗ ಕೊಲೆ ಆರೋಪ ಎದುರಿಸುತ್ತಿದ್ದಾರೆ.

Exit mobile version