Site icon newsroomkannada.com

ಪಕ್ಕದ ಮನೆಯ ಬಾತ್‌ರೂಂನಲ್ಲಿ ಯುವತಿ ಸ್ನಾನದ ರೆಕಾರ್ಡ್‌ಗೆ ಮೊಬೈಲ್‌ ಇಟ್ಟ ಯುವಕ ಅರೆಸ್ಟ್‌

ಮಂಗಳೂರು: ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋ ಗಾಗಿ ಯುವಕನೊಬ್ಬ ಬಚ್ಚಲು ಮನೆಯ ಗೋಡೆಯಲ್ಲಿ ಮೊಬೈಲ್ ಇಟ್ಟ ಘಟನೆ ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಶುಕ್ರವಾರ ನಡೆದಿದೆ.

ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋ ಗಾಗಿ ಮೊಬೈಲ್ ಇಟ್ಟಿದ್ದ ಯುವಕನನ್ನು ಸುಮಂತ್ ಪೂಜಾರಿ(22) ಎಂದು ಗುರುತಿಸಲಾಗಿದ್ದು,ಸ್ಥಳೀಯರು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಸುಮಂತ್ ಪೂಜಾರಿ ಈ ಕೃತ್ಯ ಎಸಗಿದ್ದು, ಮೊಬೈಲ್ ಇಟ್ಟಿದ್ದ ವೇಳೆ ಯುವತಿಯ ಬದಲಾಗಿ ಯುವತಿಯ ಅಣ್ಣ ಬಚ್ಚಲು ಮನೆಗೆ ಸ್ನಾನಕ್ಕಾಗಿ ಬಂದಿದ್ದ ಎನ್ನಲಾಗಿದೆ.

ಬಚ್ಚಲು ಮನೆಯಲ್ಲಿ ಮೊಬೈಲ್ ಇರೋದನ್ನು ಗಮನಿಸಿದ ಯುವತಿಯ ಅಣ್ಣ, ಅದನ್ನು ತೆಗೆದುಕೊಂಡು ಆತನನ್ನು ಹಿಡಿದಿದ್ದಾನೆ, ಈ ವೇಳೆ ಯುವತಿಯ ಅಣ್ಣನ ಕೈಗೆ ಸಿಕ್ಕಿಬಿದ್ದ ಸುಮಂತ್ ನನ್ನು ಸ್ಥಳೀಯರು ಸೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯ ಅಣ್ಣ ಪ್ರಜ್ವಲ್ ಸುಮಂತ್ ವಿರುದ್ದ ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದು, ಸುಮಂತ್ ಪೂಜಾರಿಯನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

Exit mobile version