Site icon newsroomkannada.com

Malpe Beach: ಸಮುದ್ರ ತೀರದಲ್ಲಿ ದುರಂತ: ಸಮುದ್ರದ ಅಲೆಗಳಿಗೆ ಸಿಲುಕಿ ಮೀನುಗಾರ ಸಾವು

malpe beach fishermen died

ಮಲ್ಪೆ: ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರನೋರ್ವ ಸಾವನ್ನಪ್ಪಿದ ಘಟನೆ ಮಲ್ಪೆಯಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ಮಾಗುಪಳ್ಳಿ ಹರಿಬಾಬು (52) ಮೃತಪಟ್ಟಿದ್ದು, ಶನಿವಾರ ಸಂಜೆ ವೇಳೆ ಬೋಟಿನಲ್ಲಿ ಬಲೆ ಬೀಸುತ್ತಿದ್ದಾಗ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಬಿದ್ದು ನಾಪತ್ತೆಯಾಗಿದ್ದರು. ನಾಪತ್ತೆಯಾದ ಮೀನುಗಾರರನನ್ನು ಉಳಿದ ಮೀನುಗಾರರು ಹುಡುಕಾಟ ನಡೆಸಿದ್ದು, 15 ನಾಟೆಕಲ್‌ ಮೈಲು ದೂರದಲ್ಲಿ ಐಲ್ಯಾಂಡ್‌ ಬಳಿ ಮೀನುಗಾರನ ಮೃತದೇಹ ಪತ್ತೆಯಾಗಿದೆ.

Exit mobile version