ಮಂಗಳೂರು: ಕರಾವಳಿಯಾದ್ಯಂತ ಸುಮಾರು ಹಲವಾರು ಸರ್ವಿಸ್ ಬಸ್ಸುಗಳನ್ನು ಹೊಂದಿದ್ದು, ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಕಳೆದ ಹಲವಾರು ವರ್ಷಗಳಿಂದ ಉತ್ತಮ ಸೇವೆ ಒದಗಿಸುತ್ತಿದ್ದ ಮಹೇಶ್ ಟ್ರಾವೆಲ್ಸ್ ಮಾಲಕ ಮತ್ತು ಉದ್ಯಮಿ ಪ್ರಕಾಶ್ ಶೇಖ (43) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಹೇಶ್ ಅವರು ತಮ್ಮ ಕದ್ರಿ ಕಂಬಳದಲ್ಲಿರುವ ಪ್ಲ್ಯಾಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಇದೀಗ ಮರಣೋತ್ತರ ಪರೀಕ್ಷೆಗಾಗಿ ಪ್ರಕಾಶ್ ಅವರ ಶವವನ್ನು ಎ ಜೆ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಪ್ರಕಾಶ್ ಅವರು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಸದಸ್ಯರಾಗಿ, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ, ಉದ್ಯಮಿಯಾಗಿ, ಸಮಾಜ ಸೇವಕಕರಾಗಿ ಮತ್ತು ದಾನಿಗಳಾಗಿ ವ್ಯವಹಾರ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ಇವರ ಈ ಅಕಾಲಿಕ ಮರಣ ಎಲ್ಲರಲ್ಲೂ ಆಘಾತವನ್ನುಂಟು ಮಾಡಿದೆ.
ಈ ಭಾಗದ ಯಶಸ್ವಿ ಉದ್ಯಮಿ, ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೇಖ ಅವರ ಪುತ್ರರಾಗಿರುವ ಪ್ರಕಾಶ್ ಅವರು ತಮ್ಮ ಫ್ಲ್ಯಾಟ್ ನಲ್ಲಿ ಪತ್ನಿ ಹಾಗೂ ಪುತ್ರಿಯೊಂದಿಗೆ ವಾಸವಾಗಿದ್ದರು. ಇಂದು (ಅ.01) ಬೆಳಿಗ್ಗೆ ತಮ್ಮ ಕೋಣೆಗೆ ಹೋಗಿದ್ದ ಅವರು ಮಧ್ಯಾಹ್ನ ಊಟಕ್ಕೂ ಕೋಣೆಯಿಂದ ಹೊರ ಬಂದಿರಲಿಲ್ಲ. ಪತ್ನಿ ಕರೆಯಲು ಹೋದಾಗಲೂ ಪ್ರತಿಕ್ರಿಯೆ ನೀಡದಿದ್ದಾಗ, ಸಂಶಯಗೊಂಡು ಬಾಗಿಲನ್ನು ಒಡೆದು ನೋಡಿದಾಗ ಪ್ರಕಾಶ್ ಅವರು ಫ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.
ಪ್ರಕಾಶ್ ಶೇಖ ನಿಧನಕ್ಕೆ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ಸಂತಾಪ
ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ರಿಜಿಸ್ಟರ್ ಪತ್ರಿಕಾ ಹೇಳಿಕೆ: ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಸದಸ್ಯರು ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಉದ್ಯಮಿ ಸಮಾಜ ಸೇವಕರು ದಾನಿಗಳು ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಇವರು ಮಹೇಶ್ ಮೋಟರ್ಸ್ ಇದರ ಮಾಲಕರಾಗಿರುವ ಪ್ರಕಾಶ್ ಶೇಖ ಈ ದಿನ ಅಕಾಲಿಕವಾಗಿ ನಿಧಾನವಾಗಿರುತ್ತಾರೆ ಇವರ ನಿಧನದ ಸುದ್ದಿ ಕೇಳಿ ಎಲ್ಲಾ ಬಸ್ ಮಾಲಕರು ಅಘಾತಗೊಂಡಿರುತ್ತಾರೆ ಎಲ್ಲಾ ಬಸ್ ಮಾಲಕರಿಗೂ ಇವರು ಸ್ಪೂರ್ತಿಯ ಚಿಲುಮೆಯಾಗಿದ್ದರು ಇವರ ಅಗಲಿಕೆ ಬಸ್ ಮಾಲಕರ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ಇವರ ತಂದೆಯವರಾದ ಜಯರಾಮ್ ಶೇಖ ರವರು ಬಸ್ ಮಾಲಕರ ಸಂಘದ ಹಿರಿಯರು ಹಾಗೂ ಸಂಘದ ಮಾಜಿ ಅಧ್ಯಕ್ಷರಾಗಿರುತ್ತಾರೆ ನಿಧನರಾದ ಪ್ರಕಾಶ್ ಶೇಖ ಇವರ ಆತ್ಮಕ್ಕೆ ಆ ದೇವರು ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಬಸ್ ಮಾಲಕರ ಸಂಘದ ಅಧ್ಯಕ್ಷರು ಅಜೀಜ್ ಪರ್ತಿಪ್ಪಾಡಿ ಹಾಗೂ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಇವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ