ಮಂಗಳೂರು: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ತೀರ್ಪು ಪ್ರಕಟವಾಗಿದ್ದು, ಈ ನಿಟ್ಟಿನಲ್ಲಿ ಹಿಂದೂ ಮುಖಂಡ ಮಹೇಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಸೌಜನ್ಯ ಪ್ರಕರಣದಲ್ಲಿ ನಡೆದ ತನಿಖೆಗಳೆಲ್ಲವೂ ಬೋಗಸ್ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದ ಅಣ್ಣಪ್ಪ ಇಲ್ಲವಾದರೆ ಮಂಜುನಾಥನೇ ಈ ಕೇಸಿನಲ್ಲಿ ನ್ಯಾಯ ಕೊಡಿಸಬೇಕು ಎಂದು ತಿಳಿಸಿದ್ದಾರೆ.
ಹತ್ತು ವರ್ಷ ಯಾರೋ ಹೇಳಿದರು ಎಂದು ಆರೋಪಿಯನ್ನ ಜೈಲಿಗೆ ಹಾಕಿದ್ದಾರೆ. ೧೦ ವರ್ಷ ಅವನು ಜೈಲಲ್ಲಿದ್ದ ಸಂತೋಷ್ ರಾವ್ ಅವನ ಯೌವ್ವನದ ಗತಿ ಏನಾಯಿತು. ಅವನಿಗೆ ಇನ್ನು ಯಾರು ದಿಕ್ಕು. ಧರ್ಮಸ್ಥಳದವರು ಇವರು ಎಂದು ಹೇಳಿದರೆ ಅವರು ಆರೋಪಿ. ಆದರೆ ಹುಡುಗಿಯ ಮನೆಯವರು ಹೇಳಿದ್ರೆ ಅವರು ಆರೋಪಿಗಳಲ್ಲ . ಈ ದೇಶದ ಸಂವಿಧಾನದಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ. ನಮ್ಮಲ್ಲಿ ದುಡ್ಡಿಲ್ಲ ,ನಮ್ಮತ್ರ ರಾಜಕೀಯ ಶಕ್ತಿಗಳಿಲ್ಲ. ಆದರೆ ನಮ್ಮ ಮನಸ್ಸಲ್ಲಿ ಆ ಬಡಪಾಯಿ ಹುಡುಗ ಹೊರಗಡೆ ಬರಲಿ ಎಂಬ ಇಚ್ಛೆ ಇತ್ತು. ನಾನು ಕೈಯಾರೆ ೩.೫ಲಕ್ಷ ಖರ್ಚು ಮಾಡಿ ಆತನನ್ನ ಬಿಡಿಸಿಕೊಂಡು ಬಂದಿದ್ದೆ. ಯಾಕೆಂದರೆ ಆತ ತಪ್ಪು ಮಾಡಿಲ್ಲವೆಂದು ನನಗೆ ತಿಳಿದಿತ್ತು. ಹಾಗಾದರೆ ತಪ್ಪು ಮಾಡಿದವರು ಯಾರು ..? ಸಂತೋಷ್ ಆರೋಪಿಯಲ್ಲ ಎಂದರೆ ನಮಗೆ ಸಂತೋಷದ ಸುದ್ದಿ . ಹಾಗಾದರೆ ಆರೋಪಿಗಳು ಯಾರು ..? . ನಮ್ಮ ಮೇಲೆ ಹಾಕಿದ ಕೇಸುಗಳು ಇನ್ನು ಬಾಕಿಯಿದೆ. ಎಲ್ಲಿ ನ್ಯಾಯ ಸಿಗುತ್ತೆ ನಮಗೆ. ಇನ್ನೂ ದಾಖಲೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.