Site icon newsroomkannada.com

ರಸ್ತೆಯಲ್ಲಿ ಸಿಕ್ಕ 2.43 ಲಕ್ಷ ರೂ. ಗಳನ್ನು ವಾರಸುದಾರರಿಗೆ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದ ಮದರಸಾ ಶಿಕ್ಷಕ

ಬಂಟ್ವಾಳ: ತಾಲೂಕಿನ ಕೆಳಗಿನಪೇಟೆ ರಸ್ತೆಯಲ್ಲಿ ಸಿಕ್ಕ 2.43 ಲಕ್ಷ ರೂ.ನಗದನ್ನು ಹಿಂದಿರುಗಿಸುವ ಮೂಲಕ ಮದರಸಾ ಶಿಕ್ಷಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಮನಾಝುಲ್ ಇಸ್ಲಾಂ ಮದ್ರಸದಲ್ಲಿ ಶಿಕ್ಷಕರಾಗಿದ್ದ ಅಬ್ದುಲ್ ಮಜೀದ್ ಫೈಝಿ ಅವರು ಮೇ 28ರಂದು ಬೆಳಗ್ಗೆ ಕೆಳಗಿನಪೇಟೆಯಲ್ಲಿ ರಸ್ತೆ ದಾಟುತ್ತಿದ್ದಾಗ ರಸ್ತೆಯಲ್ಲಿ ಹಣದ ಚೀಲ ಬಿದ್ದಿರುವುದು ಕಂಡು ಬಂದಿದೆ. ಅದನ್ನು ತೆರೆದು ನೋಡಿದಾಗ ಅದರೊಳಗಿದ್ದ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ಕೂಡಲೇ ಮದ್ರಸ ಆಡಳಿತ ಸಮಿತಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದರು.
ಆಡಳಿತ ಸಮಿತಿಯು ಸ್ಥಳೀಯರೊಂದಿಗೆ ಪರಿಶೀಲನೆ ನಡೆಸಿದಾಗ ನೋಟುಗಳ ಬಂಡಲ್ ಸ್ಥಳೀಯ ನಿವಾಸಿ ಶ್ರೀಪತಿ ಶ್ರೀಕಾಂತ್ ಭಟ್ ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಭಟ್ ಅವರು ಮದ್ರಸಕ್ಕೆ ಆಗಮಿಸಿ ಅಬ್ದುಲ್ ಮಜೀದ್ ಫೈಝಿ ಅವರಿಂದ ನಗದು ಪಡೆದು ಕೃತಜ್ಞತೆ ಸಲ್ಲಿಸಿದರು.

Exit mobile version