main logo

ಅಕ್ಟೋಬರ್ 28ರಂದು ಚಂದ್ರಗ್ರಹಣ: ಕುಕ್ಕೆ ಕಟೀಲಿನಲ್ಲಿ ದೇವರ ದರ್ಶನ ಸಮಯ ಬದಲು

ಅಕ್ಟೋಬರ್ 28ರಂದು ಚಂದ್ರಗ್ರಹಣ: ಕುಕ್ಕೆ ಕಟೀಲಿನಲ್ಲಿ ದೇವರ ದರ್ಶನ ಸಮಯ ಬದಲು

ಮಂಗಳೂರು: ಈ ವರ್ಷದ ದ್ವಿತೀಯ ಹಾಗೂ ಕೊನೆಯ ಚಂದ್ರಗ್ರಹಣ ಅಕ್ಟೋಬರ್ 28ರಂದು ಸಂಭವಿಸಲಿದೆ. ಅಕ್ಟೋಬರ್ 28ರ ರಾತ್ರಿ ಆರಂಭವಾಗಿ, ಅಕ್ಟೋಬರ್ 29 ರ ಮಧ್ಯರಾತ್ರಿ 2:24 ಕ್ಕೆ ಮುಕ್ತಾಯವಾಗಲಿರುವ ಈ ಭಾಗಶಃ ಚಂದ್ರ ಗ್ರಹಣ ಭಾರತದಲ್ಲೂ ಗೋಚರಿಸುತ್ತದೆ.

ಚಂದ್ರಗ್ರಹಣ ಹಿನ್ನೆಲೆಯಲ್ಲಿ ಶನಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ರಾತ್ರಿಯ ಮಹಾಪೂಜೆ ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯವಾಗಲಿದ್ದು ಬಳಿಕ ದೇವರ ದರ್ಶನ ಇರುವುದಿಲ್ಲ, ರಾತ್ರಿಯ ಭೋಜನ ಇರುವುದಿಲ್ಲ.ಸಾಯಂಕಾಲ ಆಶ್ಲೇಷಾ ಬಲಿ ಸೇವೆಯೂ ಇರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

ಕಟೀಲು ದೇವಸ್ಥಾನ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಕ್ತರಿಗೆ ದೇವಿಯ ದರ್ಶನ ಸಮಯ ಬದಲಾವಣೆ ಇಲ್ಲ. ರಾತ್ರಿಯ ಮಹಾಪೂಜೆ ಸಾಯಂಕಾಲ ಆರೂವರೆ ಒಳಗೆ ಮುಗಿಯುತ್ತದೆ. ಗ್ರಹಣದ ಸಮಯ ವಿಶೇಷ ಅಭಿಷೇಕ, ಮಧ್ಯಕಾಲದಲ್ಲಿ ವಿಸೇಷ ಅಭಿಷೇಕ ಇರುತ್ತದೆ. ಗ್ರಹಣ ಸಮಯಕ್ಕೆ ದೇವಿಯ ದರ್ಶನಕ್ಕೆ ತುಪ್ಪ, ಎಣ್ಣೆ ಸಮರ್ಪಣೆಗೆ ಅವಕಾಶ ಇದೆ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

error: Content is protected !!
ನ್ಯೂಸ್‌ರೂಮ್‌ ವಾಟ್ಸ್ಅಪ್ ಗ್ರೂಪ್ ಗೆ ಸೇರಿ