ಉಡುಪಿ: ವ್ಯಾಪಕ ಮಳೆಯಿಂದಾಗಿ ಕೃಷ್ಣಮಠ ಪಾರ್ಕಿಂಗ್ ಆಸುಪಾಸಿನ ಪ್ರದೇಶಗಳಾದ ಬೈಲಕರೆ ಹಾಗೂ ಕಲ್ಸಂಕ ಬಳಿಯ ಹಲವು ಮನೆಗಳು ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್, ಸಹಾಯಕ ಅಗ್ನಿಶಾಮಕ ದಳ ಅಧಿಕಾರಿ ಮೀರ್ ಮೊಹ್ಮದ್ ಗೌಸ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಮೊದಲಾದವರು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಸಹಕರಿಸಿದರು.