ಲಂಡನ್ : ಎರಡು ಮಕ್ಕಳ ತಾಯಿಯೊಂದಿಗೆ 16 ವರ್ಷದ ಪೋರನಿಗೆ ಲವ್ ಆಗಿದ್ದು, ಸದ್ಯ ಆತ 9 ತಿಂಗಳ ಮಗುವಿನ ತಂದೆಯಾಗಿದ್ದಾನೆ. ಇಂಗ್ಲೆಂಡಿನ ಡರ್ಹಾಮ್ ಸಿಟಿಯ 31 ವರ್ಷದ ಕ್ಯಾಥಲಿನ್ ಮಾರ್ಟಿನಾ ಮತ್ತು 16 ವರ್ಷದ ಜ್ಯಾಕ್ ಕುಸಾಯಿಲ್ ಇಬ್ಬರು ಸಹ ವಯಸ್ಸಿನ ಭೇದ ಮರೆತು ಪ್ರೇಮದ ಬಲೆಯಲ್ಲಿ ಸಿಲುಕಿದ ಜೋಡಿಗಳು ಮಾರ್ಟಿನಾ ತನ್ನ ಪತಿಯಿಂದ ವಿಚ್ಚೇದನ ಪಡೆದಿದ್ದು, ಆ ವೇಳೆ ಆಕೆ 11 ವರ್ಷದ ಹಾಗು 3 ವರ್ಷದ ಎರಡು ಗಂಡು ಮಕ್ಕಳನ್ನು ಹೊಂದಿದ್ದಳು.ಫೇಸ್‌ಬುಕ್‌ನಲ್ಲಿಲವ್: ಪತಿಯ ವಿಚ್ಛೇದನ ಬಳಿಕ ಮಾರ್ಟಿನಾನಗೆ ಫೇಸ್‌ಬುಕ್‌ನಲ್ಲಿ ಜ್ಯಾಕ್‌ನ ಪರಿಚಯವಾಗಿದೆ. ಫೇಸ್‌ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಚಾಟಿಂಗ್ ಮಾಡುತ್ತ ಸ್ನೇಹಿತರಾಗಿದ್ದಾರೆ. ಒಂದು ದಿನ ಮಾರ್ಟಿನಾ ತನ್ನ ಮನೆಯ ಗಾರ್ಡನ್ ಕೆಲಸಕ್ಕಾಗಿ ಜ್ಞಾಕ್‌ಗೆ ಸಹಾಯ ಕೇಳಿ ಮನೆಗೆ ಬರುವಂತೆ ಹೇಳಿದ್ದು. ಅಂದು ಇಬ್ಬರೂ ಮೊದಲ ಭೇಟಿಯಾಗಿದ್ದಾರೆ. ಮುಂದೆ ಮಾರ್ಟಿನಾ ಮತ್ತು ಜ್ಯಾಕ್ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ಬದಲಾಗಿತ್ತು.
ಮನೆಯಲ್ಲಿ ವಿರೋಧ: ಇಬ್ಬರ ಪ್ರೀತಿ ಐದು ತಿಂಗಳ ಆದ್ಮಲೆ ಜ್ಯಾಕ್ ತಾಯಿ ಇವರಿಬ್ಬರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಡಿಸಿದ್ದರು. ಜ್ಯಾಕ್ ತಾಯಿಯ ಪ್ರಕಾರ ತಮ್ಮ ಮಗ ಮಾರ್ಟಿನಾಳ ಅರ್ಧ ವಯಸ್ಸಿನವನಾಗಿದ್ದನು. ಈ ಹಿನ್ನೆಲೆಯಲ್ಲಿ ಜ್ಯಾಕ್‌ರ ತಾಯಿ ಇವರಿಬ್ಬರ ಸಂಬಂಧಕ್ಕೆ ವಿರೋಧಿಸಿದ್ದರು. ಕೊನೆಗೆ ಮಾರ್ಟಿನಾ 5 ತಿಂಗಳ ಗರ್ಭೀಣಿ ಎಂದು ತಿಳಿದಾಗ ಜ್ಯಾಕ್ ತಾಯಿ ಒಪ್ಪಿದ್ದಾರೆ. ಜ್ಞಾಕ್ ಈಗ 18 ವರ್ಷದವನಾಗಿದ್ದು, 9 ತಿಂಗಳು ಮಗನ ತಂದೆಯಾಗಿದ್ದಾನೆ.