ಚಿಕಮಗಳೂರು: ಲವ್ ಜಿಹಾದ್ ಅಂದ್ರೆ, ಪ್ರೀತಿಸಿ ಅವರಿಗೆ ಇಷ್ಟವಾದವರನ್ನ ಮದುವೆ ಆಗ್ತಾರೆ ಎಂಬ ಲವ್ ಅಟ್ ಫಸ್ಟ್ ಸೈಟ್ ಅಲ್ಲ. ನಾನು ಹಾಗೇ ತಿಳಿದುಕೊಂಡಿದ್ದೆ. ಆದ್ರೆ, ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಮತಾಂತರ ಮಾಡುವ ಲವ್ ಅಟ್ ಬ್ಯಾಕ್ ಸೈಟ್ ಎಂದು ಮಾಜಿ ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲವ್ ಅಟ್ ಫಸ್ಟ್ ಸೈಟ್ ಅಂದ್ರೆ, ಲವ್ ಅಟ್ ಬ್ಯಾಕ್ ಸೈಟ್ ಎಂದು ಅರ್ಥ. ಅಲ್ಲಿ ಲವ್ ಗೆ ಟ್ರೈನಿಂಗ್ ಕೊಡುತ್ತಾರೆ. ಅವರು ಹಾಗೇ ಹೋಗಿ ಲವ್ ಮಾಡಲ್ಲ. ಮೊದಲೇ ಪ್ರಿಪೇರ್ ಮಾಡಿಕೊಂಡಿರುತ್ತಾರೆ. ಒಳ್ಳೆಯ ಬೈಕ್ ಕೊಡಿಸುತ್ತಾರೆ, ಬಾಡಿ ಬಿಲ್ಡ್ ಮಾಡಲು ಜಿಮ್‌ಗೆ ಕಳಿಸುತ್ತಾರೆ. ಒಳ್ಳೆ ಬಟ್ಟೆ ಕೊಟ್ಟು ಖರ್ಚಿಗೆ ಹಣವನ್ನೂ ಕೊಡ್ತಾರೆ. ಎಲ್ಲಾ ಮಾಡಿ, ಹಿಂದೂ ಹುಡುಗಿಯರನ್ನ ಲವ್ ಮಾಡಿ ಅಂತಾ ಕಳಿಸುತ್ತಾರೆ. ಇದು ನಿಜವಾದ ಲವ್ ಜಿಹಾದ್ ಎಂದು ಹೇಳಿದ್ದಾರೆ.
Photo Credit – Twitter