main logo

ಗಾಂಜಾ ವಾಸನೆ ಹಿಂದೆ ಹೋದಳೇ ಚೈತ್ರಾ ಹೆಬ್ಬಾರ್?

ಗಾಂಜಾ ವಾಸನೆ ಹಿಂದೆ ಹೋದಳೇ ಚೈತ್ರಾ ಹೆಬ್ಬಾರ್?

ಮಂಗಳೂರು: ಇಲ್ಲಿನ ಕೋಟೆಕಾರು ಬಳಿಯ ಪಿಜಿಯಲ್ಲಿದ್ದ ಪುತ್ತೂರು ಮೂಲದ ಪಿಹೆಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ವಾರದ ಹಿಂದೆ ನಾಪತ್ತೆಯಾಗಿದ್ದು, ಇದವರೆಗೆ ಪತ್ತೆಯಾಗಿಲ್ಲ. ಚೈತ್ರಾ ತಂಗಿದ್ದ ಪಿಜಿಗೆ ಬರುತ್ತಿದ್ದ ಯುವಕನೊಬ್ಬ ಗಾಂಜಾ ರುಚಿ ತೋರಿಸಿ ಯುವತಿಯನ್ನು ಕರೆದೊಯ್ದ ಅನುಮಾನ ವ್ಯಕ್ತವಾಗಿದೆ.

ಚೈತ್ರಾ ತಂಗಿದ್ದ ಪಿಜಿಗೆ ಶಂಕಿತ ಯುವಕ ಬರುತ್ತಿದ್ದ ಬಗ್ಗೆ ಚೈತ್ರಾಳ ಮನೆಯವರಿಗೆ ಮಾಡೂರು ಬಜರಂಗದಳದ ಕಾರ್ಯಕರ್ತರು ಮಾಹಿತಿ ನೀಡಿದ್ದರು. ಮಾಹಿತಿ ನೀಡಿದ ಬಳಿಕ ಚೈತ್ರಾ ಹೆಬ್ಬಾರ್‌ ನಾಪತ್ತೆಯಾಗಿದ್ದಳು. ತಂದೆ ನಿಧನದ ನಂತರ ತನ್ನ ಆರೈಕೆಯಲ್ಲಿ ಚೈತ್ರಾ ಇದ್ದ ಹಿನ್ನೆಲೆ ಆಕೆಯ ದೊಡ್ಡಪ್ಪ ಪೊಲೀಸ್ ಠಾಣೆಗೆ ದೂರು ನಿಡಿದ್ದರು.

ಪೊಲೀಸರಿಗೆ ದೂರು ನೀಡಿ ಒಂದು ವಾರವಾದರೂ ಚೈತ್ರಾ ಪತ್ತೆಯಾಗಿಲ್ಲ. ಇನ್ನೆರಡು ದಿನಗಳಲ್ಲಿ ಪತ್ತೆಯಾಗದೇ ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಬಜರಂಗದಳ ಕರ್ನಾಟಕ ಪ್ರಾಂತ ಸಂಚಾಲಕ ಮುರಳಿ ಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ಹೊರವಲಯದ ದೇರಳಕಟ್ಟೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಎಸ್​ಸಿ ಮುಗಿಸಿದ ನಂತರ ಚೈತ್ರಾ ಕೋಟೆಕಾರು ಬಳಿಯ ಖಾಸಗಿ ಪಿಜಿಯಲ್ಲಿ ಇದ್ದುಕೊಂಡು ಫುಡ್ ಸೆಕ್ಯುರಿಟಿ ವಿಷಯದ ಮೇಲೆ ಪಿಹೆಚ್​ಡಿ ಅಧ್ಯಯನ ಮಾಡುತ್ತಿದ್ದಳು. ಫೆ.17 ರಂದು ಬೆಳಗ್ಗೆ 9 ಗಂಟೆಗೆ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದಾಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ದೊಡ್ಡಪ್ಪ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!