Site icon newsroomkannada.com

ಮಾಜಿ ಪ್ರೇಯಸಿಯ ಕಿರುಕುಳ ತಡೆಯಲಾರದೆ ಆತ್ಮಹತ್ಯೆಗೆ ಮುಂದಾದ ಯುವಕ

ಬ್ರೇಕಪ್ ಆದ ಬಳಿಕವು ಮಾಜಿ ಪ್ರಿಯಕರನಿಗೆ ಕಿರುಕುಳ ನೀಡುತ್ತಿದ್ದ ಯುವತಿಯ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಈ ಸ್ಟೋರಿ ಪೂರ್ತಿಯಾದ ಓದಿದರೆ ಶತ್ರುಗೂ ಈ ತರ ಗೆಳತಿ ಸಿಗೋದು ಬೇಡ ಅಂತ ನೀವು ಅಂದುಕೊಳ್ಳುವುದು ಖಂಡಿತಾ.
ಈ ವ್ಯಕ್ತಿಯ ಹೆಸರು ಜರ್ಲಾಟ್ ರೈಸ್. ಅವರು ಐರ್ಲೆಂಡ್‌ನ ಚಲನಚಿತ್ರ ನಿರ್ಮಾಪಕ. ಡೈಲಿ ಮೇಲ್ ವರದಿಯ ಪ್ರಕಾರ, ಅವರು ಇತ್ತೀಚೆಗೆ ಸಾಕ್ಷ್ಯಚಿತ್ರಕ್ಕಾಗಿ ತಮ್ಮ ಜೀವನದಲ್ಲಿ ಕರಾಳ ಪ್ರೇಮ ಕಥೆಯನ್ನು ಹಂಚಿಕೊಂಡಿದ್ದಾರೆ. 2002ರಲ್ಲಿ ರೈಸ್ ತನ್ನ ಪ್ರೇಯಸಿ ಲೀನಾ ತಂತಾಶ್​​ಯನ್ನು ಮೊದಲ ಬಾರಿಗೆ ಕೆಫೆಯೊಂದರಲ್ಲಿ ಭೇಟಿಯಾಗಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ದಿನಗಳೆದಂತೆ ಪ್ರೇಯಸಿಯ ವಿಚಿತ್ರ ನಡತೆಯಿಂದಾಗಿ ನಿಧಾನವಾಗಿ ಅವಳಿಂದ ದೂರವಿರಲು ನಿರ್ಧರಿಸುತ್ತಾನೆ. ದಿನದಿಂದ ಆತನ ಮೇಲೆ ವಿಚಿತ್ರ ಶರತ್ತುಗಳನ್ನು ನೀಡಲು ಪ್ರಾರಂಭಿಸುತ್ತಾಳೆ. ಆಕೆಯ ಪ್ರಕಾರ ಆತ ವಾರದಲ್ಲಿ ಕನಿಷ್ಠ ಮೂರು ದಿನಗಳನ್ನು ಕಳೆಯಬೇಕು, ಪ್ರತಿದಿನ ಸಂಜೆ 15 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡಬೇಕು ಎಂದು ಶರತ್ತು ಹಾಕಿದ್ದಳು. ಮೇಲಾಗಿ ತನ್ನ ಮಾತು ಕೇಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಫೋನ್‌ನಲ್ಲಿ ಮಾತ್ರವಲ್ಲದೆ ಇಮೇಲ್‌ಗಳ ಮೂಲಕ ಅವನಿಗೆ ನಿರಂತರವಾಗಿ ಕಿರುಕುಳ ನೀಡಲಾರಂಭಿಸಿದ್ದಳು.
ಲೀನಾಳ ಚಿತ್ರಹಿಂಸೆಯನ್ನು ಸಹಿಸಲಾಗದ ಕಾರಣ ರೈಸ್ ತನ್ನ ಫೋನ್​​​​ ನಂಬರ್​ ಬದಲಾಯಿಸಿದನು. ಆದ್ರೆ ಲೀನಾಗೆ ಆ ನಂಬರ್ ಹೇಗೋ ಗೊತ್ತಾಗಿತ್ತ. ಹೊಸ ನಂಬರ್ ಗೆ ಕರೆ ಮಾಡಿ,ಇಲ್ಲವೇ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದಳು. ರೈಸ್ ಎಲ್ಲಿಗೆ ಹೋಗುತ್ತಿದ್ದಾನೆ ಎಂದು ಕಂಡುಹಿಡಿಯಲು ಅವಳು ಒಬ್ಬ ಗೂಢಚಾರಿಯನ್ನು ನೇಮಕ ಮಾಡಿದ್ದಳು. ಜೊತೆಗೆ ಅವನನ್ನು ಕೊಲ್ಲಲು ಪ್ರಯತ್ನಿಸಿದ್ದಳು. ಆಕೆಯ ಕಿರುಕುಳ ತಡೆಯಲಾರದೆ ದೇಶ ತೊರೆದು ಹೋಗಿದ್ದರೂ ಕೂಡ ಅವಳು ತನ್ನ ಸ್ನೇಹಿತರೊಬ್ಬರ ಮೂಲಕ ಕರೆ ಮಾಡಿ ರೈಸ್‌ಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದಳು. ಕೊನೆಗೆ ಲೀನಾಳ ಕಿರುಕುಳ ಸಹಿಸಲಾಗದ ರೈಸ್ ಪೊಲೀಸರಿಗೆ ದೂರು ನೀಡಿದ್ದಾನೆ. ಈತನ ದೂರಿನ ಆಧಾರದ ಮೇಲೆ ಆಕೆಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Exit mobile version