Site icon newsroomkannada.com

ಇಂಜಿನಿಯರ್ಸ್‌ ಲವ್‌ ಬ್ರೇಕಪ್‌: ಬೆಟ್ಟಕ್ಕೆ ಕರೆದೊಯ್ದು ಪ್ರೇಯಸಿಯ ಕತ್ತುಕೊಯ್ದ ಪಾಗಲ್‌ ಪ್ರೇಮಿ

ಹಾಸನ: ಪ್ರೀತಿ ಮಾಡಿದವನೇ ತನ್ನ ಪ್ರೇಯಸಿಯನ್ನು ಕುಂತಿಬೆಟ್ಟಕ್ಕೆ ಕರೆದೊಯ್ದು ಕುತ್ತಿಗೆ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಪ್ರೀತಿಸಿದ ಯುವಕನೇ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ದುರ್ಘಟನೆ ಹಾಸನದ ಅಗಿಲೆ ಬಳಿಯ ಕುಂತಿಬೆಟ್ಟದಲ್ಲಿ ನಡೆದಿದೆ. ಸುಚಿತ್ರಾ (21) ಕೊಲೆಯಾದ ಪ್ರಿಯತಮೆ ಆಗಿದ್ದಾಳೆ. ತೇಜಸ್ ಕೊಲೆ ಮಾಡಿದ ಪ್ರಿಯಕರನಾಗಿದ್ದಾನೆ. ಈ ಇಬ್ಬರೂ ಹಾಸನದ ಬಳಿಯಿರುವ ಮೊಸಳೆ ಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಆದರೆ, ಲವ್ ಬ್ರೇಕಪ್ ಆಗಿತ್ತು ಎಂದು ತಿಳಿದುಬಂದಿದೆ. ನಾನು ನಿನ್ನೊಂದಿಗೆ ಮಾತನಾಡಬೇಕು ಎಂದು ಆಕೆಯನ್ನು ಹತ್ತಿರದಲ್ಲಿಯೇ ಇರುವ ಕುಂತಿ ಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ ಬಿಸಾಡಿ ಬಂದಿದ್ದಾನೆ.

ಸುಚಿತ್ರಾಳನ್ನು ಇಂದು ಮುಂಜಾನೆ ತನ್ನೊಟ್ಟಿಗೆ ಕರೆದೊಯ್ದಿದ್ದ ತೇಜಸ್, ಅಲ್ಲಿ ಆಕೆಯನ್ನು ಬರ್ಬರವಾಗಿ ಕೊಲೆಗೈದು ಒಬ್ಬನೇ ವಾಪಸ್‌ ಬಂದಿದ್ದಾನೆ. ಅಲ್ಲಿಗೆ ಹೋದವರು ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಯುವತಿಯ ಮಾಹಿತಿ ಕಲೆಹಾಕಿದಾಗ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಎಂಬುದು ಗೊತ್ತಾಗಿದೆ. ನಂತರ, ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಸ್ನೇಹಿತರನ್ನು ವಿಚಾರಿಸಿದಾಗ ಆಕೆಯನ್ನು ಬೆಳಗ್ಗೆ ತೇಜಸ್‌ ಕರೆದೊಯ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ, ಆತನ ಮೊಬೈಲ್‌ ನಂಬರ್‌ ಟ್ರೇಸ್‌ ಮಾಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Exit mobile version