Site icon newsroomkannada.com

21 ಲಕ್ಷ ಮೌಲ್ಯದ ಟೊಮೆಟೊ ತುಂಬಿದ್ದ ಲಾರಿ ನಾಪತ್ತೆ

ಕೋಲಾರ: ಇದೀಗ ಟೊಮೆಟೊ ಗೆ ಚಿನ್ನದ ದರ ಬಂದಿದೆ. ಎಲ್ಲಿ ನೋಡಿದರೂ ಟೊಮೆಟೊದ್ದೇ ಮಾತು. ಅಂತಹ ರಾಜಮರ್ಯಾದೆಯ ತರಕಾರಿಯಾಗಿ ಟೊಮೆಟೊ ಸ್ಥಾನ ಪಡೆದಿದೆ. ಈ ನಡುವೆ ಟೊಮೆಟೊ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಅದೇ ರೀತಿ ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮೆಟೊ ತುಂಬಿದ್ದ ಲಾರಿ ನಾಪತ್ತೆಯಾಗಿದೆ. ಕೋಲಾರದ ಮೆಹತ್ ಟ್ರಾನ್ಸ್​​ಪೋರ್ಟ್​ಗೆ ಸೇರಿದ ಲಾರಿ ಇದಾಗಿದ್ದು ಇದರಿಲ್ಲಿ ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮೆಟೊಗಳಿದ್ದವು. ಲಾರಿ ಚಾಲಕ ಮೊಬೈಕ್​ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆ ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಇನ್ನು ಟೊಮೆಟೊ ಬೆಲೆ ಏರಿಕೆಯಾಗಿದ್ದು ಕಳ್ಳರು ಕೆಂಪು ರಾಣಿ ಕದಿಯಲು ಹೊಂಚುಹಾಕುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯ INR ಮಂಡಿಯಲ್ಲಿ ಟೊಮೆಟೊ ಕದಿಯುವ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ರಾತ್ರಿ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳ್ಳ ತನ್ನ ಕರಾಮತ್ತು ತೋರಿಸಿದ್ದಾನೆ. ಸುತ್ತಮುತ್ತ ನೋಡಿ ಒಂದು ಬಾಕ್ಸ್ ಟೊಮೆಟೊ ಎಗರಿಸಿದ್ದಾನೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version