ಪುತ್ತೂರು: ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವು ಕಡೆಗಳಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ಹಲವು ಅಧಿಕಾರಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ಈ ನಡುವೆ ಕೆ.ಆರ್.ಪುರ ತಹಶೀಲ್ದಾರ್ ಮನೆಗೆ ಲೋಕಾಯುಕ್ತ ದಾಳಿ ನಡೆದಿದೆ. ಮೂಲತಃ ಪುತ್ತೂರಿನವರಾದ ಅಜಿತ್ ಕುಮಾರ್ ರೈ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸೊರಕೆಯಲ್ಲಿ ಕೂಡ ಮನೆ ಹೊಂದಿದ್ದು, ಆದಾಯಕ್ಕಿಂತ ಜಾಸ್ತಿ ಆದಾಯ ಹೊಂದಿದ ಆರೋಪದ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಸರ್ವೇಯರ್ ಆಗಿದ್ದ ಆನಂದ ರೈ ಕರ್ತವ್ಯದಲ್ಲಿದ್ದ ನಿಧನರಾಗಿದ್ದು ಅನುಕಂಪದ ಆಧಾರದ ಮೇಲೆ ಅಜಿತ್ ಕುಮಾರ್ ರೈ ಅವರಿಗೆ ಸರ್ಕಾರಿ ಉದ್ಯೋಗ ದೊರೆತಿತ್ತು. ಹಿಂದೊಮ್ಮೆ ಒತ್ತವರಿದಾರರಿಗೆ ಸಹಕರಿಸಿದ ಆರೋಪದ ಮೇಲೆ ಅಜಿತ್ ಕುಮಾರ್ ರೈ ಅವರು ಅಮಾನತುಗೊಂಡಿದ್ದರು. ಈಗ ಮತ್ತೊಮ್ಮೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ದಾಳಿ ನಡೆದಿದೆ.