ನವದೆಹಲಿ: ಇಂಟರ್ ನೆಟ್ ಜಗತ್ತಿನಲ್ಲಿ ಚಿತ್ರವಿಚಿತ್ರ ಸಂಗತಿಗಳು ವೈರಲ್ ಆಗುತ್ತವೆ. ಅದೇ ರೀತಿ ಅನಾರೋಗ್ಯವೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಬಾಯಿಯಿಂದ ವೈದ್ಯರ ತಂಡವೊಂದು ಉದ್ದನೆಯ ಹಾವನ್ನು ಸರಸರನೆ ಎಳೆದುಹಾಕಿದ್ದಾರೆ.
ಇನ್ನೂ ಗಾಬರಿಪಡುವಂತಹ ಸಂಗತಿಯೆಂದರೆ ಆ ಹಾವು ಜೀವಂತವಾಗಿತ್ತು! ಮಹಿಳೆಯ ಹೊಟ್ಟೆಯೊಳಕ್ಕೆ ಆ ಹಾವು ಹೇಗೆ ಪ್ರವೇಶಿಸಿತು ಎಂಬದು ಇಲ್ಲಿ ಆಶ್ಚರ್ಯವನ್ನುಂಟು ಮಾಡುವ ಅಂಶ. ಅಂತರ್ಜಾಲದಲ್ಲಿ ಬಹಳಷ್ಟು ಜನರು ಇದು ಹೇಗೆ ಸಾಧ್ಯ ಎಂದು ಕೇಳುತ್ತಿದ್ದಾರೆ. ವೈರಲ್ ವೀಡಿಯೋದಲ್ಲಿ ಮಹಿಳೆಯ ಬಾಯಿಯಿಂದ ಡಾಕ್ಟರ್ ಸುಮಾರು ಒಂದು ಮೀಟರ್ ಉದ್ದ ಇರುವ ಹಾವನ್ನು ತೆಗೆಯುವುದು ಗೋಚರವಾಗುತ್ತದೆ.
Another fear is unlocked pic.twitter.com/ykNg8wKOZl
— Insane Reality Leaks (@InsaneRealitys) October 7, 2023