main logo

ತಿಮರೋಡಿ ತಾಕತ್ತಿದ್ದರೆ ಕಾನತ್ತೂರಿಗೆ ಆಣೆ ಪ್ರಮಾಣಕ್ಕೆ ಬರಲಿ

ತಿಮರೋಡಿ ತಾಕತ್ತಿದ್ದರೆ ಕಾನತ್ತೂರಿಗೆ ಆಣೆ ಪ್ರಮಾಣಕ್ಕೆ ಬರಲಿ

ಮಂಗಳೂರು: ಮಹೇಶ್‌ ತಿಮರೋಡಿ ಅವನ ಅಪ್ಪನಿಗೆ ಹುಟ್ಟಿದ್ರೆ ಆಣೆ ಪ್ರಮಾಣಕ್ಕೆ ಬರಲಿ. ಕಾನತ್ತೂರು ನಾಲ್ವರ್ ದೈವಗಳ ಎದುರು ಬಂದು ಆಣೆ ಮಾಡಲಿ ಎಂದು ಧೀರಜ್‌ ಕೆಲ್ಲ ಸವಾಲು ಹಾಕಿದರು.

ಹಣ ಮಾಡುವ ಉದ್ದೇಶದಿಂದ ಮಹೇಶ್‌ ಶೆಟ್ಟಿ ತಿಮರೋಡಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪವನ್ನು ನಮ್ಮ ಮೇಲೆ ಹಾಕಿದ್ದರು. ಸಿಬಿಐ ಈ ಪ್ರಕರಣದಲ್ಲಿ ತೀರ್ಪುಕೊಟ್ಟ ಮೇಲೂ ನಮ್ಮ ಮೇಲೆ ಆರೋಪ ಮಾಡುತ್ತಿರುವ ಮಹೇಶ್‌ ಶೆಟ್ಟಿ ಕಾನತ್ತೂರು ನಾಲ್ವರ್ ದೈವಗಳ ಎದುರು ಬಂದು ಆಣೆ ಮಾಡಲಿ ಎಂದು ಧರ್ಮಸ್ಥಳದ ಧೀರಜ್ ಕೆಲ್ಲ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಸವಾಲು ಹಾಕಿದ್ದಾರೆ.

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ-ಕೊಲೆ ಕೇಸ್‌ನಲ್ಲಿ ಆರೋಪಿ ಸಂತೋಷ್ ದೋಷಮುಕ್ತ ವಿಚಾರಕ್ಕೆ ಸಂಬಂಧಿಸಿ ಆರೋಪ ಹೊತ್ತಿದ್ದ ಧರ್ಮಸ್ಥಳದ ಧೀರಜ್ ಕೆಲ್ಲ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಸೌಜನ್ಯ ಕುಟುಂಬಿಕರು ಮತ್ತು ಹೋರಾಟಗಾರರು ಈ ಮೂವರ ಮೇಲೆ ಆರೋಪ ಮಾಡಿದ್ದು, ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್ ನಲ್ಲಿ ಈ ಮೂವರ ವಿರುದ್ದ ಆರೋಪ ಮಾಡಲಾಗಿತ್ತು.

ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಧೀರಜ್‌ ಕೆಲ್ಲಾ, ದುಡ್ಡು ಮಾಡುವ ಏಕೈಕ ಉದ್ದೇಶದಿಂದ ತಿಮರೋಡಿ ನಮ್ಮ ವಿರುದ್ಧ ಆರೋಪ ಮಾಡಿದ್ದರು. ನಾವು ತನಿಖೆಗೆ ಹಾಜರಾದರೂ ಸುಖಾಸುಮ್ಮನೆ ನಮ್ಮ ವೇಳೆ ಆರೋಪ ಮಾಡಲಾಗಿತ್ತು. ಹೀಗಾಗಿ ನಾವು ಕಾನತ್ತೂರು ದೈವರ ಮೊರೆ ಹೋಗಿ ಆಣೆಗೆ ಕರೆದಿದ್ದೆವು, ಆದರೆ ಅದನ್ನು ತಪ್ಪಿಸಿದ್ದರು. 2014ರಲ್ಲಿ ಜುಲೈ ಹಾಗೂ ಅಗಸ್ಟ್ ನಲ್ಲಿ ಸಿಬಿಐ ನಮ್ಮನ್ನು ಎರಡೆರೆಡು ಬಾರಿ ಬೆಳ್ತಂಗಡಿ ಐಬಿಯಲ್ಲಿ ತನಿಖೆ ಮಾಡಿತ್ತು. ಚೆನ್ನೈ, ಬೆಂಗಳೂರಿಗೂ ಕರೆಸಿ ನಮ್ಮ ತನಿಖೆ ಮಾಡಿದ್ದಾರೆ. ನಮ್ಮ ರಕ್ತ ಪರೀಕ್ಷೆ, ಡಿಎನ್ಎ ಪರೀಕ್ಷೆ, ಮಂಪರು ಪರೀಕ್ಷೆ (ಬ್ರೈನ್ ಮ್ಯಾಪಿಂಗ್) ನ್ನು ಕೂಡ ಸಿಬಿಐ ನಡೆಸಿದೆ. ಮೊಬೈಲ್ ಲೊಕೇಶನ್ ಟ್ರೇಸ್, ಸುಳ್ಳು ಪತ್ತೆಯ ಪಾಲಿಗ್ರಾಫ್ ಟೆಸ್ಟ್ ಜೊತೆ ಅನೇಕ ವೈಜ್ಞಾನಿಕ ಪರೀಕ್ಷೆ ಮಾಡಲಾಗಿದೆ. 2015ರ ಫೆ.23ರಂದು ನಮ್ಮ ಮನವಿ ಮೇರೆಗೆ ಸಿಬಿಐ ಬೆಂಗಳೂರಿನ ಕೋರ್ಟ್ ಗೆ ಬ್ರೈನ್ ಮ್ಯಾಪಿಂಗ್ ಗೆ ಅರ್ಜಿ ಹಾಕಲಾಗಿತ್ತು.

ಕೋರ್ಟ್ ಅನೇಕ ಬಾರಿ ಇದರ ಅಡ್ಡ ಪರಿಣಾಮಗಳ ಬಗ್ಗೆ ಹೇಳಿತ್ತು. ಆದರೆ ನಮ್ಮ‌ ಮನವಿ ಮೇರೆಗೆ ಕೋರ್ಟ್ ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಗೆ ಅನುಮತಿ ನೀಡಿತ್ತು. ಕೊನೆಗೆ ಎಲ್ಲಾ ತನಿಖೆ ಬಳಿಕ ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತು. ಆದರೆ ಆ ಆರೋಪ ಪಟ್ಟಿಯಲ್ಲಿ ಎಲ್ಲೂ ನಮ್ಮನ್ನ ಅಪರಾಧಿ ಮಾಡಿಲ್ಲ. ಆದರೆ ಮತ್ತೆ ಸೌಜನ್ಯ ತಂದೆ ನಮ್ಮನ್ನು ಸಹ ಆರೋಪಿ ಮಾಡಲು ಅರ್ಜಿ ಹಾಕಿದ್ದರು. ಆದರೆ ನಮ್ಮ ಅನುಪಸ್ಥಿತಿಯಲ್ಲಿ ಕೋರ್ಟ್ ನಮಗೆ ಸಮನ್ಸ್ ನೀಡಿತು. ಹೀಗಾಗಿ ನಾವು ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದಾಗ ನ್ಯಾಯಾಲಯ ಸಿಬಿಐ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿತು. ನಮ್ಮ ವಿರುದ್ದ ಯಾವುದೇ ಸಾಕ್ಷ್ಯ, ಆರೋಪ ಇಲ್ಲದ ಕಾರಣ ಸಹ ಆರೋಪಿ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸೌಜನ್ಯಾ ತಂದೆಯ ಮನವಿ ರದ್ದು ಮಾಡಿತು. ಇದೀಗ ಇಡೀ ಕೇಸ್ ನಲ್ಲಿ ಸಿಬಿಐ ಕೋರ್ಟ್ ತೀರ್ಪು ಕೊಟ್ಟಿದೆ. ಹೀಗಿದ್ದರೂ ಮಹೇಶ್ ಶೆಟ್ಟಿ ಮತ್ತೆ ನಮ್ಮ ವಿರುದ್ದ ಆರೋಪ‌ ಮಾಡುತ್ತಿದ್ದಾನೆ. ಮಾಧ್ಯಮಗಳ ಎದುರು ಬಂದು ನಮ್ಮ ವಿರುದ್ದ ಆರೋಪ ಮಾಡುತ್ತಿದ್ದಾನೆ. ಹೀಗಾಗಿ ನಾವು ಮತ್ತೆ ಅವರನ್ನು ಆಣೆ ಪ್ರಮಾಣಕ್ಕೆ ಕರಿಯುತ್ತಿದ್ದೇವೆ.

ತಿಮರೋಡಿ ಅವನ ಅಪ್ಪನಿಗೆ ಹುಟ್ಟಿದ್ರೆ ಆಣೆ ಪ್ರಮಾಣಕ್ಕೆ ಬರಲಿ. ಕಾನತ್ತೂರು ನಾಲ್ವರ್ ದೈವಗಳ ಎದುರು ಬಂದು ಆಣೆ ಮಾಡಲಿ ಎಂದು ಕೆಲ್ಲ ಸವಾಲು ಹಾಕಿದರು. ಆರೋಪಿ ಸಂತೋಷ್ ನನ್ನು ನಾವು ಕಳ್ಳತನದ ಸಂಶಯದ ಮೇಲೆ ಪೊಲೀಸರಿಗೆ ಹಿಡಿದು ಕೊಟ್ಟಿದ್ದೆವು. ಆದರೆ ಪೊಲೀಸರು ಅವನನ್ನು ಅರೆಸ್ಟ್ ಮಾಡಿದ್ದರು. ನಾವು ಅವನೇ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಆರೋಪಿ ಅಂತ ಹೇಳಿಲ್ಲ, ಅದು ನಮಗೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಅಭಯ ಚಂದ್ರ ಜೈನ್ ಕೂಡ ಮಾತನಾಡಿದ್ದು, ತಿಮರೋಡಿ ವಿರುದ್ದ ಗುಡುಗಿದರು. ತಿಮರೋಡಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ದ ಮಾತನಾಡುತ್ತಿದ್ದಾನೆ. ಅವನು ಹಣ ಮಾಡುವ ಉದ್ದೇಶದಿಂದ ಇದನ್ನು ಮಾಡುತ್ತಿದ್ದಾನೆ. ಅವನು ಒಬ್ಬ ರೌಡಿಶೀಟರ್, ಬೆಳ್ತಂಗಡಿ ತಾಲೂಕಿನ ಕೆಟ್ಟ ವ್ಯಕ್ತಿ. ಅವನ ಈ ಹೇಳಿಕೆಗಳ ವಿರುದ್ಧ ನಾವು ಪ್ರತಿಭಸುತ್ತೇವೆ. ಅವನಿಗೆ ತಲೆ ಸರಿ ಇಲ್ಲ, ನಮ್ಮ ಹೆಗ್ಗಡೆಯವರ ಬಗ್ಗೆ ಮಾತನಾಡುತ್ತಾನೆ. ಅವನ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದರು. ಸಮಾಜದ ವ್ಯಕ್ತಿ ವಿರುದ್ದ ಅವನು ಅಪನಂಬಿಕೆ ಮೂಡಿಸುತ್ತಿದ್ದಾನೆ. ತಿಮರೋಡಿ ಎಷ್ಟೇ ದೊಡ್ಡ ರೌಡಿಯಾದ್ರೂ ನಾವು ನೋಡಿಕೊಳ್ಳುತ್ತೇವೆ. ತಿಮರೋಡಿ ನೈಜ ಆರೋಪಿಗಳ ಪತ್ತೆಗೆ ಐಜಿ ಕಚೇರಿ ಎದುರು ಹೋರಾಟ ಮಾಡಲಿ. ಅದು ಬಿಟ್ಟು ಯಾರೋ ದೊಡ್ಡ ವ್ಯಕ್ತಿ ವಿರುದ್ದ ಮಾತನಾಡುವುದಲ್ಲ ಎಂದರು. ಅದೇ ರೀತಿ ಸೌಜನ್ಯ ಮಾವ ವಿಠಲ ಮತ್ತು‌ ಮಹೇಶ್ ಶೆಟ್ಟಿ ವಿರುದ್ದ ತನಿಖೆ‌ ನಡೆಯಬೇಕು ಎಂದರು

Related Articles

Leave a Reply

Your email address will not be published. Required fields are marked *

error: Content is protected !!