ದೆಹಲಿ: ವಿದ್ಯೆ ನೀಡುವ ಶಿಕ್ಷಕರನ್ನು ದೇವರೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚೆಗೆ ಶಿಕ್ಷಕರೆ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿದ್ದು, ಶಿಕ್ಷಕ ವೃತ್ತಿಯ ಪ್ರತಿಷ್ಠೆಗೆ ಕಳಂಕ ತರುತ್ತಿದ್ದಾರೆ. ಅಂತಹುದೇ ಪ್ರಕರಣವೊಂದು ದೆಹಲಿಯಲ್ಲಿ ನಡೆದಿದೆ.
ಕಾಲೇಜು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯ. ಹೀಗೆ ಮನಾಲಿಗೆ ಪ್ರವಾಸ ಹೋದ ಉಪನ್ಯಾಸಕಿಗೆ 20 ವರ್ಷದ ವಿದ್ಯಾರ್ಥಿ ಮೇಲೆ ಲವ್ ಶುರುವಾಗಿದೆ. ಇದು ಕೇವಲ ಅಟ್ರಾಕ್ಷನ್ ಆಗಿರಲಿಲ್ಲ. ಉಪನ್ಯಾಸಕಿ ಪ್ರೀತಿಯಲ್ಲಿ ಸಿಹಿ ಮುತ್ತುಗಳು ಹಂಚಿಕೆಯಾಗಿತ್ತು. ಅಪ್ಪುಗೆಯ ರೋಮ್ಯಾನ್ಸ್ ಇತರ ವಿದ್ಯಾರ್ಥಿಗಳನ್ನು ಮುಜುಗರಕ್ಕೀಡುಮಾಡಿತ್ತು. ಇದೇ ಪ್ರವಾಸ ಮುಗಿಯುವಷ್ಟರೊಳಗೆ 20 ವರ್ಷದ ವಿದ್ಯಾರ್ಥಿಯನ್ನು 35 ವರ್ಷದ ಪಿಎಚ್‌ಡಿ ಮಾಡಿದ ಉಪನ್ಯಾಸಕಿ ಮದುವೆಯಾಗಿದ್ದರು. ಮನಾಲಿಯ ಸಣ್ಣ ದೇವಸ್ಥಾನದಲ್ಲಿ ಮದುವೆ ಕೂಡ ನಡೆದಿತ್ತು. ಆದರೆ ವಿದ್ಯಾರ್ಥಿಗೆ ಮದುವೆಯ ವಯಸ್ಸು ಆಗಿರಲಿಲ್ಲ. ಹೀಗಾಗಿ ವರ್ಷದ ಬಳಿಕ ಅಧಿಕೃತ ಮದುವೆ ಮಾತುಕತೆಯೂ ನಡೆದಿತ್ತು. ಮನಾಲಿ ಪ್ರವಾಸದ ಬೆನ್ನಲ್ಲೇ ಉಪನ್ಯಾಸಕಿ ಗರ್ಭಿಣಿಯಾಗಿದ್ದಾಳೆ. ಇಲ್ಲೀವರೆಗೆ ಇವರ ಪ್ರೀತಿ ಸರಾಗವಾಗಿತ್ತು. ಆದರೆ ದಿಢೀರ್ ಯೂಟರ್ನ್ ಪಡೆದುಕೊಂಡಿತು. ಉಪನ್ಯಾಸಕಿ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿದ್ಯಾರ್ಥಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದಾರೆ.
ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ವಿದ್ಯಾರ್ಥಿಗೆ ಬಂಧನ ಭೀತಿ ಎದುರಾಗಿದೆ. ತಕ್ಷಣವೇ ನಿರೀಕ್ಷಣಾ ಜಾಮೀನಿಗಾಗಿ ವಿದ್ಯಾರ್ಥಿ ಮನವಿ ಮಾಡಿದ್ದಾನೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ವಿದ್ಯಾರ್ಥಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ದೆಹಲಿ ಹೈಕೋರ್ಟ್ ಜಸ್ಚೀಸ್ ಸೌರಬ್ ಬ್ಯಾನರ್ಜಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.