Site icon newsroomkannada.com

ಕೇಂದ್ರ ಬಜೆಟ್‌ ಕುರಿತು ಫೆ.10 ಕ್ಕೆ ಉಪನ್ಯಾಸ

ಮಂಗಳೂರು ಪ್ರೊಡೆಕ್ಟಿವಿಟಿ ಕೌನ್ಸಿಲ್‌ ಸಹಯೋಗದೊಂದಿಗೆ ಕೇಂದ್ರ ಬಜೆಟ್‌ 2024 ಮತ್ತು ಭಾರತೀಯ ಅರ್ಥವ್ಯವಸ್ಥೆ ಕುರಿತು ಉಪನ್ಯಾಸ ಕಾರ್ಯಕ್ರಮ ಫೆ.10ರಂದು ಕೆನರಾ ಕಾಲೇಜು ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್‌ ಅಧ್ಯಕ್ಷ ಯು. ರಾಮರಾವ್‌ ತಿಳಿಸಿದರು.
ಮಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸಿದ್ಧ ಸಿಎ ಎಸ್‌.ಎಸ್‌ ನಾಯಕ್‌ ಅವರು ಉಪನ್ಯಾಸ ನೀಡಲಿದ್ದಾರೆ. ಕರ್ಣಾಟಕ ಬ್ಯಾಂಕ್‌ ಕೋಡಿಯಾಲ್‌ ಬೈಲ್‌ ಬ್ರಾಂಚ್‌ ಚೀಫ್‌ ಮ್ಯಾನೇಜರ್‌ ಕೆ.ಎಸ್‌ ಲಕ್ಷ್ಮಿನಾರಾಯಣ ರಾವ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಪಿ. ರವೀಂದ್ರ ರಾವ್‌, ಖಜಾಂಚಿ ಚಂದ್ರಶೇಖರ ಮಯ್ಯ ಮೊದಲಾದವರಿದ್ದರು.

Exit mobile version