ಮುಂಬೈ: ದೇಶದ ಅಪ್ರಪತಿಮ ಗಾಯಕಿ ಲತಾ ಮಂಗೇಶ್ಕರ್ ಅವರು ದೇಶದ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವರ ಗಾಯನಕ್ಕೆ ದೇಶ ವಿದೇಶಗಳಲ್ಲಿಯೂ ಅಭಿಮಾನಿಗಳು ತಲೆದೂಗುತ್ತಾರೆ. ಈಗ ಅವರ ಕುರಿತು ಅವರ ಕುಟುಂಬದ ಆಪ್ತರಿಂದ ಒಂದು ಅಚ್ಚರಿಯ ವಿಚಾರ ಹೊರಬಿದ್ದಿದೆ. ಕೊನೆಯ ದಿನಗಳಲ್ಲಿ ಲತಾ ಮಂಗೇಶ್ಕರ್ ಅವರು ಶ್ರೀರಾಮನ ಭಜನೆ, ಶ್ಲೋಕಗಳನ್ನು ರೆಕಾರ್ಡ್ ಮಾಡಿದ್ದರಂತೆ. ರಾಮ ಮಂದಿರ ಉದ್ಘಾಟನೆ ವೇಳೆ ತಾವು ಹಾಡಿದ ಶ್ಲೋಕಗಳು, ಭಜನೆಗಳು ಪ್ರಸಾರ ಕಾಣಬೇಕು ಎಂಬುದು ಅವರ ಉದ್ದೇಶವಾಗಿತ್ತು. ಲತಾ ಮಂಗೇಶ್ಕರ್ ಮೃತಪಟ್ಟು ಹಲವು ಸಮಯದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಲತಾ ಮಂಗೇಶ್ಕರ್ ಅವರು ಸಣ್ಣ ವಯಸ್ಸಿಗೆ ಸಂಗೀತ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರಿಗೆ ದೊಡ್ಡ ಬೇಡಿಕೆ ಸೃಷ್ಟಿ ಆಯಿತು. 13ನೇ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡ ಲತಾ ಮಂಗೇಶ್ಕರ್, ನಂತರ ಕುಟುಂಬದ ಜವಾಬ್ದಾರಿಯನ್ನೂ ಸ್ವೀಕರಿಸಿದರು. ಅವರು 36 ಭಾಷೆಗಳಲ್ಲಿ 25 ಸಾವಿರ ಹಾಡನ್ನು ಹಾಡಿದ್ದಾರೆ. ‘ನೈಟಿಂಗೇಲ್ ಆಫ್ ಇಂಡಿಯಾ’, ‘ಕ್ವೀನ್ ಆಫ್ ದಿ ಮೆಲೋಡಿ’, ‘ವಾಯ್ಸ್ ಆಫ್ ದಿ ಮಿಲೇನಿಯಮ್’, ‘ವಾಯ್ಸ್ ಆಫ್ ದಿ ನೇಷನ್’ ಸೇರಿ ಹಲವು ಬಿರುದುಗಳಿಂದ ಅವರು ಗುರುತಿಸಿಕೊಂಡಿದ್ದರು.