Site icon newsroomkannada.com

ನಾ ತಪ್ಪು ಮಾಡಿಲ್ಲ ಎಂದ್ರು ಕಿರುತೆರೆ ನಟಿ ಲಕ್ಷ್ಮಿ

ಬೆಂಗಳೂರು: ತಮ್ಮ ಸ್ಕೂಟಿಗೆ ಕಾರು ಡಿಕ್ಕಿ ಹೊಡೆಸಿ, ತಮ್ಮನ್ನು ಅವಾಚ್ಯ ಪದಗಳಿಂದ ನಟಿ (Actress) ಲಕ್ಷ್ಮಿ ಸಿದ್ದಯ್ಯ (Lakshmi Siddaiah) ನಿಂದಿಸಿದ್ದಾರೆ ಎಂದು ಇಬ್ಬರು ಹುಡುಗಿಯರು ಆರೋಪ ಮಾಡಿದ್ದರು. ತಮ್ಮನ್ನು ನಿಂದಿಸಿದ್ದಲ್ಲದೇ, ತಮ್ಮ ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತಂತೆ ನಟಿ ಲಕ್ಷ್ಮಿ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಡಿಸೆಂಬರ್ 6ರಂದು ನಡೆದಿರುವ ಘಟನೆ (Accident). ನಾನು ವೇಗವಾಗಿ ಕಾರು ಓಡಿಸ್ತಿದ್ದೆ ಎಂದು ಹೇಳ್ತಾರೆ. ಜ್ಞಾನ ಭಾರತಿ ರಸ್ತೆಯಲ್ಲಿ, ಅದೂ ಸಂಜೆ ವೇಳೆ ಕಾರನ್ನು ವೇಗವಾಗಿ ಓಡಿಸೋಕೆ ಸಾಧ್ಯವೇ ಇಲ್ಲ. ಆ ಹುಡುಗಿಯರು ಸುಳ್ಳು ಹೇಳುತ್ತಿದ್ದಾರೆ. ಅವರ ದ್ವಿಚಕ್ರವಾಹನಕ್ಕೆ ಟಚ್ ಆಗಿದ್ದು ನಿಜ. ಅವರೇ ನನ್ನ ಮೇಲೆ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದು. ಅವರ ಅಣ್ಣ, ತಾಯಿ ಎಲ್ಲರೂ ಸ್ಥಳಕ್ಕೆ ಬಂದಿದ್ದರು. ನನಗೆ ಶೂಟಿಂಗ್ ಇದ್ದ ಕಾರಣ ಬೇಗ ಹೊರಟೆ. ದುಡ್ಡಿಗಾಗಿ ಅವರು ಬೇಡಿಕೆ ಇಟ್ಟರು. ನಾನು ಕೊಡುವುದಿಲ್ಲ ಎಂದೆ. ಅಷ್ಟೇ ಆಗಿದ್ದು. ಅವರು ಸುಳ್ಳು ಹೇಳುತ್ತಿದ್ದಾರೆ ಅಂತಾರೆ ಲಕ್ಷ್ಮಿ.

ತಪ್ಪು ಮಾಡಿಲ್ಲ ಹಾಗಾಗಿ ಕಾಸು ಕೊಡಲ್ಲ ಎಂದಿರುವ ಲಕ್ಷ್ಮಿ, ಆ ಸಹೋದರಿಯ ಕಡೆಯಿಂದ ತಮಗೆ ಕರೆ ಬಂದಾಗ ಎರಡು ಲಕ್ಷ ರೂಪಾಯಿ ಕೇಳಿದರು ಎಂದು ಲಕ್ಷ್ಮಿ ಹೇಳಿದ್ದಾರೆ. ಅವರ ಮೇಲೆ ಕಾನೂನು ರೀತಿಯ ಕ್ರಮಕ್ಕಾಗಿ ಕೋರ್ಟ್ ಗೆ ಮೊರೆ ಹೋಗುವುದಾಗಿಯೂ ನಟಿ ತಿಳಿಸಿದ್ದಾರೆ.

Exit mobile version