main logo

ಕೇರಳದ 19 ನರ್ಸ್‌ಗಳನ್ನು ಬಂಧಿಸಿದ ಕುವೈತ್‌: ಹಾಲುಣಿಸುವ ತಾಯಂದಿರನ್ನು ಜೈಲಿಗೆ ಹಾಕಿ ಕ್ರೌರ್ಯ

ಕೇರಳದ 19 ನರ್ಸ್‌ಗಳನ್ನು ಬಂಧಿಸಿದ ಕುವೈತ್‌: ಹಾಲುಣಿಸುವ ತಾಯಂದಿರನ್ನು ಜೈಲಿಗೆ ಹಾಕಿ ಕ್ರೌರ್ಯ

ಕುವೈತ್: ಕುವೈತ್ ಮ್ಯಾನ್‌ಪವರ್ ಸಮಿತಿಯ ನಿಯಮಗಳನ್ನು ಉಲ್ಲಂಘಿಸಿ ಕೆಲಸ ನಿರ್ವಹಿಸುತ್ತಿದ್ದ 30 ಭಾರತೀಯರು ಸೇರಿದಂತೆ 60 ಜನರನ್ನು ಬಂಧಿಸಿದೆ. ಅವರಲ್ಲಿ, 19 ಕೇರಳದ ನರ್ಸ್‌ಗಳು ಕೂಡ ಸೇರಿದ್ದಾರೆ. ಇಲ್ಲಿನ ಮಲಿಯಾದಲ್ಲಿರುವ ಖಾಸಗಿ ಕ್ಲಿನಿಕ್ ಮೇಲೆ ದಾಳಿ ಮಾಡಿದ ನಂತರ ನರ್ಸ್‌ಗಳನ್ನು ಬಂಧಿಸಲಾಗಿದೆ.

ಕುವೈತ್‌ನಲ್ಲಿ ಕೆಲಸ ಮಾಡಲು ದಾದಿಯರು ಸಂಬಂಧಿತ ಪರವಾನಗಿ ಅಥವಾ ಅಗತ್ಯ ಅರ್ಹತೆಗಳನ್ನು ಹೊಂದಿಲ್ಲ ಎಂದು ಕುವೈತ್ ಗೃಹ ಸಚಿವಾಲಯ ತಿಳಿಸಿದೆ. ಆದರೆ, ಬಂಧಿತ ಮಲಯಾಳಿ ನರ್ಸ್‌ಗಳೆಲ್ಲರೂ ಸಂಸ್ಥೆಯಲ್ಲಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಅವರ ಸಂಬಂಧಿಕರುಹೇಳುತ್ತಿದ್ದಾರೆ. ಎಲ್ಲರೂ ಮಾನ್ಯತೆ ಪಡೆದ ವೀಸಾ ಹೊಂದಿದ್ದಾರೆ. 3ರಿಂದ 10 ವರ್ಷಗಳಿಂದ ಒಂದೇ ಆಸ್ಪತ್ರೆಯಲ್ಲಿ ಹಲವರು ಕೆಲಸ ಮಾಡುತ್ತಿದ್ದಾರೆ. ಭಾರತವಲ್ಲದೆ ಫಿಲಿಫೈನ್ಸ್, ಈಜಿಪ್ಟ್ ಮತ್ತು ಇರಾನ್‌ನ ಜನರು ಈಗ ಸೆರೆವಾಸದಲ್ಲಿದ್ದಾರೆ. ಆಸ್ಪತ್ರೆಯು ಇರಾನ್ ಪ್ರಜೆಯ ಒಡೆತನದಲ್ಲಿದ್ದು, ಮಾಲೀಕರು ಮತ್ತು ಪ್ರಾಯೋಜಕರ ನಡುವಿನ ನರ್ಸ್‌ಗಳ ಬಂಧನಕ್ಕೆ ಕಾರಣ ಎಂದು ನರ್ಸ್‌ಗಳ ಸಂಬಂಧಿಕರು ಹೇಳಿದ್ದಾರೆ.

ದುರದೃಷ್ಟವಶಾತ್, ಬಂಧಿತ ದಾದಿಯರಲ್ಲಿ ಐದು ಮಂದಿ ಹಾಲುಣಿಸುವ ತಾಯಂದಿರು ಇದ್ದಾರೆ. ಜೆಸ್ಸಿನ್ ಎಂಬುವರು ಕುವೈತ್‌ ನ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ಅವರನ್ನು ಹೆರಿಗೆ ರಜೆಯ ನಂತರ ಕೆಲಸಕ್ಕೆ ಹಿಂದಿರುಗಿದ ದಿನವೇ ಬಂಧಿಸಲಾಗಿದೆ. ಈ ಮಧ್ಯೆ ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಕೇಂದ್ರ ಸಚಿವ ವಿ ಮುರಳೀಧರನ್ ಮಧ್ಯಪ್ರವೇಶದ ನಂತರ, ಜೈಲಿನಲ್ಲಿ ಶಿಶುಗಳಿಗೆ ಹಾಲುಣಿಸಲು ತಾಯಂದಿರಿಗೆ ಅವಕಾಶವನ್ನು ಒದಗಿಸಲಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಭಾರತೀಯ ರಾಯಭಾರಿ ಕಚೇರಿ ಹಾಗೂ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನರ್ಸ್‌ಗಳ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ನರ್ಸ್‌ಗಳ ಸಂಬಂಧಿಕರು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!