main logo

ಬಿಲಿಯೇನರ್ ರೈತ ಪ್ರಶಸ್ತಿಗೆ ಕುಂದಾಪುರದ ಕೃಷಿಕ ಆಯ್ಕೆ

ಬಿಲಿಯೇನರ್ ರೈತ ಪ್ರಶಸ್ತಿಗೆ ಕುಂದಾಪುರದ ಕೃಷಿಕ ಆಯ್ಕೆ

ಕುಂದಾಪುರ: ಕೃಷಿಯನ್ನೆ ನಂಬಿಕೊಂಡು ಇಂದು ಅದೆಷ್ಟೋ ಕುಟುಂಬಗಳು ಜೀವನ ಸಾಗಿಸಿ ಉತ್ತಮವಾದ ಯಶಸ್ಸು ಕಂಡುಕೊಂಡಿರುವವರು ತುಂಬಾ ಜನ ಇದ್ದಾರೆ. ಅಂತಹದೇ ದಾರಿಯಲ್ಲಿ ನಡೆದು ಇಂದು ಕೋಟಿ ಸಂಪಾದಿಸುತ್ತಿದ್ದಾರೆ ಉಡುಪಿ ಕೆದೂರಿನಲ್ಲಿ ಕೃಷಿ ಭೂಮಿ ಹೊಂದಿರುವ ರಮೇಶ್‌ ನಾಯಕ್‌ ( ತೆಕ್ಕಟ್ಟೆ ರಮೇಶ್‌ ನಾಯಕ್‌). ಇವರು ರೈಸ್​ಮಿಲ್​ ಉದ್ಯಮದ ಜೊತೆಗೆ ಕೃಷಿ ಮೌಲ್ಯವರ್ಧನೆ ಹಾಗೂ ಗ್ರಾಮೀಣ ರೈತರಿಗೆ ಬೆನ್ನುಲುಬಾಗಿ ನಿಂತು ವಾರ್ಷಿಕ ಸುಮಾರು ಕೋಟಿ ರೂ. ಅಧಿಕ ವಹಿವಾಟು ಮಾಡುತ್ತಿದ್ದಾರೆ.

ಇದೀಗ ಇ‌ರಮೇಶ್ ಕೇಂದ್ರ ಸರ್ಕಾರ ಕೊಡಮಾಡುವ ಬಿಲಿಯೇನರ್ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಡಿಸೆಂಬರ್ 7ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಮೇಶ್ ನಾಯರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.

ರೈಸ್​ಮಿಲ್ ಉದ್ಯಮಿಯಾಗಿರುವ ರಮೇಶ್ ನಾಯಕ್ ಅವರು ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ಸುಮಾತು 13 ಎಕರೆ ಜಮೀನಿನಲ್ಲಿ ಸುಮಾರು 11 ಜಾತಿಯ 1634 ವಿವಧ ತಳಿತ ಹಣ್ಣಿನ ಗಿಡಗಳನ್ನು ನೆಟ್ಟು ಉತ್ತಮ ಫಲ ಕಂಡುಕೊಂಡಿದ್ದಾರೆ. ಈ ಮೂಲಕ ನಿಸರ್ಗ ಪ್ರೇಮ ಮೆರೆದು ಉಡುಪಿ ಜಿಲ್ಲೆಯ ಮಾದರಿ ರೈತ ಎನಿಸಿಕೊಂಡಿದ್ದಾರೆ. ಇಂಗು ಗುಂಡಿಯಿಂದ ತೆಗೆಯಲಾದ ಮಣ್ಣನ್ನು ಉಪಯೋಗಿಸಿ 30 ಸಾವಿರ ಅನಾನಸ್ ಗಿಡಗಳನ್ನು ನಾಟಿ ಮಾಡಲಾಗಿದ್ದು, ಇದರ ಮಧ್ಯೆ ಪಪ್ಪಾಯಿ ಗಿಡಗಳನ್ನು ನೆಟ್ಟಿದ್ದಾರೆ. ಈ ನಡುವೆ ಡೆಂಗ್ ಸೂರ್ಯ, ಪ್ರಕಾಶ್ಚಂದ್ರ, ವಿಯೆಟ್ನಾಂ, ಸೂಪರ್ ಅರ್ಲಿ, ಸಿಂಗಾಪುರ, ಅತ್ತಾವರ ಜಾತಿಯ ಸುಮಾರು 285 ಹಲಸು ಹಾಗೂ 500 ಡ್ರ್ಯಾಗನ್ ಫ್ರೂಟ್ ಸೇರಿದಂತೆ ಒಟ್ಟು 1634 ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಮಾದರಿಯಾಗಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!