Site icon newsroomkannada.com

ಟೆಂಪೋ ರಿಕ್ಷಾ ಚಾಲಕನ ಓವರ್ ಟೇಕ್ ಧಾವಂತ : ಸರಕಾರಿ ಬಸ್ಸು ಚಾಲಕನ ಸಮಯಪ್ರಜ್ಞೆ – ಮುಂದೇನಾಯ್ತು?

ಬಂಟ್ವಾಳ: ಟೆಂಪೋ ರಿಕ್ಷಾ ಚಾಲಕನ ಓವರ್ ಟೇಕ್ ಭರಾಟೆ ಮತ್ತು ಸರಕಾರಿ ಬಸ್ಸು ಚಾಲಕನ ಸಮಯಪ್ರಜ್ಞೆಯಿಂದ ಅಪಘಾತವೊಂದು ತಪ್ಪಿದ್ದು, ಈ ಪ್ರಯತ್ನದಲ್ಲಿ ಬಸ್ಸು ತೀರಾ ಬದಿಗೆ ಸರಿದು ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದರೂ ಅದೃಷ್ಟವಶಾತ್ ಯಾವುದೇ ಗಂಭೀರ ಅಪಾಯಗಳು ಸಂಭವಿಸದಿರುವ ಘಟನೆಯೊಂದು ವರದಿಯಾಗಿದೆ.

ಬಂಟ್ವಾಳ (Bantwala) ತಾಲೂಕಿನ ಸಜೀಪಮೂಡ (Sajipoamoda) ಗ್ರಾಮದ ಕಂದೂರಿನಲ್ಲಿ ಈ ಘಟನೆ ನಡೆದಿದ್ದು, ಭಾರೀ ಅವಘಡ ತಪ್ಪಿಸಿದ ಸರಕಾರಿ ಬಸ್ಸು (KSRTC) ಚಾಲಕನ ಸಮಯಪ್ರಜ್ಞೆಗೆ ಇದೀಗ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಏನಾಯಯ್ತು?

ಕಂದೂರಿನಲ್ಲಿ ಟೆಂಪೋ ರಿಕ್ಷಾ ಚಾಲಕನೋರ್ವ ಆಕ್ಟಿವಾ ಸ್ಕೂಟರನ್ನು ಓವರ್ ಟೇಕ್ ಮಾಡಲು ಹೋಗಿದ್ದು ಈ ಸಂದರ್ಭ ಮುಡಿಪು ಮಾರ್ಗವಾಗಿ ಬರುತ್ತಿದ್ದ ಕಾಸರಗೋಡು – ಬಿ.ಸಿ. ರೋಡ್ ಬಸ್ಸಿನ ಚಾಲಕ ರಿಕ್ಷಾಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ಸನ್ನು ರಸ್ತೆ ಬದಿಗೆ ಬಸ್ಸನ್ನು ಚಲಾಯಿಸಿದ ಪರಿಣಾಮ ಬಸ್ಸು ಅಲ್ಲಿದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ಮೆಲ್ಕಾರಿನಿಂದ ಮೀನು ತುಂಬಿಕೊಂಡು ಬರುತ್ತಿದ್ದ ಟೆಂಪೋ ರಿಕ್ಷಾ ಚಾಲಕ ಇಲ್ಯಾಸ್, ಕಂದೂರಿನ ಬಜಾರ್ ಅಡಿಟೋರಿಯಮ್ ಬಳಿ ಆಕ್ಟೀವಾ ಒಂದನ್ನು ಓವರ್ ಟೇಕ್ ಮಾಡಲು ಹೋಗಿದ್ದು ಈ ವೇಳೆ ಕಾಸರಗೋಡಿನಿಂದ ಬಿಸಿ ರೋಡಿಗೆ ಬರುತ್ತಿದ್ದ ಸರಕಾರಿ ಬಸ್ ಎದುರಾಗಿದೆ.

ತಕ್ಷಣವೇ ಬಸ್ ‍ಚಾಲಕ ಸಮಯ ಪ್ರಜ್ಞೆಯಿಂದ ಟೆಂಪೋ ರಿಕ್ಷಾ ಚಾಲಕನನ್ನು ಬಚಾವ್ ಮಾಡಲು ಹೋಗಿ ಪಕ್ಕದಲ್ಲಿದ್ದ ಕರೆಂಟ್ ಕಂಬಕ್ಕೆ ಗುದ್ದಿದ್ದಾರೆ, ಬಸ್ ಗುದ್ದಿದ್ದ ರಭಸಕ್ಕೆ ಕರೆಂಟ್ ಕಂಬ ತುಂಡಾಗಿದೆ.

ಬಸ್ಸಿನಲ್ಲಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ತಕ್ಷಣ ಸ್ಥಳಕ್ಕೆ ಬಂದ ಮೆಸ್ಕಾಮ್ ಸಿಬ್ಬಂದಿಗಳು ಸಂಭವಿಸಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಿದ್ದಾರೆ.

ಮೆಸ್ಕಾಂ ಸಿಬ್ಬಂದಿಗಳು ಮುರಿದ ಕರೆಂಟ್ ಕಂಬವನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಥಳಕ್ಕೆ ನಂದ ಬಂಟ್ವಾಳ ಸಂಚಾರಿ ಠಾಣಾ ಪೋಲಿಸರು ಪರಿಶೀಲನೆ‌ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version