Site icon newsroomkannada.com

ಬ್ಲೂ ಸೀರೆಯಲ್ಲಿ ಸಖತ್ತಾಗಿ ಮಿಂಚುತ್ತಿದ್ದಾರೆ ಕರಾವಳಿಯ ಬ್ಯೂಟಿ

ಬೆಂಗಳೂರು: ಕರ್ನಾಟಕ ಮೂಲದ ಚೆಲುವೆ ಕೃತಿ ಶೆಟ್ಟಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್. ಇತ್ತೀಚೆಗೆ ಅವರು ಬ್ಲೂ ಕಲರ್ ಸ್ಯಾರಿಯಲ್ಲಿ ಸಖತ್ ಸ್ಟೈಲಿಶ್ ಆಗಿ ಫೋಸ್ ನೀಡಿದ್ದು, ಪಡ್ಡೆಹುಡುಗರ ಮನಸ್ಸು ಕದ್ದಿದ್ದಾರೆ.
ಬ್ಲ್ಯೂ ಸೀರೆಯುಟ್ಟ ಕೃತಿ ಶೆಟ್ಟಿ ಹೇರ್ ಓಪನ್ ಬಿಟ್ಟು ಮುದ್ದು ಮುದ್ದಾಗಿ ಫೋಟೋಗೆ ಫೋಸ್ ನೀಡಿದ್ದು, ‘ಹ್ಯಾಪಿ ಸಂಕ್ರಾಂತಿ’ ಎಂದು ಶೀರ್ಷಿಕೆ ನೀಡಿದ್ದಾರೆ.
ಟಾಲಿವುಡ್ ಇಂಡಸ್ಟ್ರಿಯಲ್ಲಿ ಮೋಸ್ಟ್ ವಾಂಟೆಡ್ಹೀರೋಯಿನ್‌ಗಳಲ್ಲಿ ಕೃತಿ ಶೆಟ್ಟಿ  ಒಬ್ಬರು.  ಮಂಗಳೂರಿನ ಬೆಡಗಿ ಈಕೆ. ಹಲವು ಖ್ಯಾತ ನಟರ ಜೊತೆ ತೆರೆ ಹಂಚಿಕೊಂಡು ಮಿಂಚುತ್ತಿದ್ದಾರೆ. ಆದ್ರೆ ಇತ್ತೀಚಿಗೆ ನಟಿಸಿದ ಹಲವು ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಆದರೂ ನಟಿ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರ್ತಾರೆ.
ಕೃತಿ ಶೆಟ್ಟಿ ನಟನೆ ಆರಂಭಿಸಿದ್ದು ಹಿಂದಿ ಸಿನಿಮಾ ಮೂಲಕ. ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು. ಕೃತಿ ಶೆಟ್ಟಿ ‘ಉಪ್ಪೇನ’ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.

 

Exit mobile version