ಕೋಟ: ಕೋಟದ ಪುರಾಣ ಪ್ರಸಿದ್ಧ ದೇಗುಲವಾದ ಕೋಟದ ಮಹಾತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವಾರ್ಷಿಕ ಜಾತ್ರೋತ್ಸವ ಕೋಟ ಹಬ್ಬ ೨೦೨೪ ಸಾಂಸ್ಕöÈತಿಕ ಪರ್ವ ಕಾರ್ಯಕ್ರಮ ಫೆ.೨೨ರಿಂದ ಮೊದಲ್ಗೊಂಡು ೨೫ರ ವರೆಗೆ ವೈಭವದಿಂದ ನಡೆಯಲಿದೆ. ಈ ಪ್ರಯುಕ್ತ ಶ್ರೀ ದೇವರ ಉತ್ಸವಮೂರ್ತಿಯನ್ನು ಮೂರು ದಿಕ್ಕುಗಳಿಗೆ ಕೊಂಡ್ಯೋಯ್ದು ಕಟ್ಟೆ ಪೂಜೆ ನೆರವೆರಿಸಲಾಗುತ್ತದೆ.
೨೪ರಂದು ವಾರ್ಷಿಕ ರಥೋತ್ಸವ,,ಅನ್ನಸಂತರ್ಪಣೆ,ಕೀಲು ಕುದುರೆ ಸಹಿತ ವಿಶೇಷ ಮೆರವಣಿಗೆಗಳು ಹೆದ್ದಾರಿಯ ಮೂಲಕ ಸಂಚರಿಸಲಿದೆ. ೨೫ಕ್ಕೆ ಓಕುಳಿ ಕಾರ್ಯಕ್ರಮಗಳು ನಡೆಯಲಿದೆ.
ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದದಿಂದ ಸಾಂಸ್ಕೃತಿಕ ವೈಭವ
ಪ್ರತಿವರ್ಷ ಶ್ರೀ ದೇಗುಲದ ಜಾತ್ರೋತ್ಸವದ ಅಂಗವಾಗಿ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದದಿಂದ ಸಾಂಸ್ಕೃತಿಕ ಪರ್ವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರ ಭಾಗವಾಗಿ ೪೮ನೇ ವರ್ಷದ ಸಾಂಸ್ಕöÈತಿಕ ವೈಭವ ಕಾರ್ಯಕ್ರಮ ಶ್ರೀ ದೇಗುಲದ ಓಲಗ ಮಂಟಪದಲ್ಲಿ ಸಂಪನ್ನಗೊಳ್ಳಲಿದೆ. ೨೨ರ ಸಂಜೆ ೭.ರಿಂದ ಸ್ಪೆಪ್ ಅಂಡ್ ಸ್ಟೈಲ್ ಸಾಸ್ತಾನ ಇವರಿಂದ ನೃತ್ಯ, ಹೆಸರಾಂತ ನಾಟಕ ತಂಡ ಅಭಿನಯ ಕಲಾವಿದರು ಅರ್ಪಿಸುವ ಶಾಂಭವಿ ಪ್ರದರ್ಶನಗೊಳ್ಳಲಿದೆ.
೨೩ರಂದು ಹಿರೇಮಹಾಲಿಂಗೇಶ್ಚರ ಮಿತ್ರವೃಂದದ ಮಕ್ಕಳಿಂದಕಾರ್ಯಕ್ರಮ ವೈವಿದ್ಯ, ರಾತ್ರಿ ೯ಕ್ಕೆ ಶಿವಾನಿ ಮ್ಯೂಸಿಕಲ್ ಆರ್ಕೆಸ್ಟ್ರಾ ರಥೋತ್ಸವ ಅಂಗವಾಗಿ ಅಪರಾಹ್ನ ಮಹಾಅನ್ನಸಂತರ್ಪಣೆ, ಸಂಜೆ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯರಿದ ಗಂಗೆ,ತುಂಗೆ,ಕಾವೇರಿ ಯಕ್ಷಗಾನ ಜತೆಗೆ ಮಿತ್ರವೃಂದದ ವಿಶೇಷ ಪುರಸ್ಕಾರ ಯಕ್ಷ ಕಲಾವಿದರಾದ ಶ್ರೀಪಾದ್ ಹೆಗಡೆ ಥಂಡಿಮನೆ, ಹಾಸ್ಯಕಲಾವಿದ ರವೀಂದ್ರ ದೇವಾಡಿಗ ಅವರಿಗೆ ನೀಡಲಾಗುವುದು. .೨೫ರ ರಾತ್ರಿ ೭.೩೦ಕ್ಕೆ ಸಿಂಚನಾ ಹೆಗಡೆ ಇವರ ತಂಡದಿಂದ ಗಾನ ನಾಟ್ಯ ವೈಭವ ನಡೆಯಲಿದೆ.
ಕೋಟ.ಫೆ.೨೧ ಕೋಟ ಜಾತ್ರೆ