Site icon newsroomkannada.com

ಕರ್ನಾಟಕದಲ್ಲಿ ಮತ್ತೆ ಜಲಪ್ರಳಯ: ಕೋಡಿ ಶ್ರೀ ಭವಿಷ್ಯ

ಹುಬ್ಬಳ್ಳಿ: ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಇಂದು ಹುಬ್ಬಳ್ಳಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಆದರೆ ಈ ಬಾರಿಯ ಮಾತುಗಳು ಕೂಡ ನಿಗೂಢವಾಗಿದ್ದು,ಮುಖ್ಯವಾಗಿ ರಾಜಕೀಯ ಭವಿಷ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಹಿಂದೆ ಒಂದು ಸರ್ಕಾರ ಬರುತ್ತೆ. ಸ್ಥಿರ ಸರ್ಕಾರ ಇರುತ್ತೆ ಅಂತ ಹೇಳಿದ್ದೆ ಅದು ನಿಜ ಆಗಿದೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತೆ ಜಲಪ್ರಳಯ ಆಗೋ ಆಗುವ ಲಕ್ಷಣ ಇದೆ ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜಾಗತಿಕವಾಗಿ ಮೂರು ಗಂಡಾಂತರ ಕಾದಿದ್ದು, ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಜನರ ಅಕಾಲಿಕ ಮೃತ್ಯು ಆಗುವ ಸೂಚನೆ ಇದ್ದು,ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ದುರ್ಘಟನೆ ನಡೆಯುತ್ತದೆ ಎಂದು ಹೇಳಿದ್ದಾರೆ.

ಆಳುವವರು ಅರಿತರೆ ಗಂಡಾತರದಿಂದ ಪಾರಾಗಬಹುದು. ಇಲ್ಲಾ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂದು ಸರ್ಕಾರಗಳಿಗೆ ಸಲಹೆ ನೀಡಿದ್ದು,ಕರುನಾಡಿಗೂ ಕೆಲವೊಂದು ಆಪತ್ತು ಇದೆ ಎಂದು ಈ ಸಂದರ್ಭದಲ್ಲಿ ಹೇಳಿದರು.ಜಗತ್ತಿನ ಸಾಮ್ರಾಟರು ತಲ್ಲಣ ಆಗ್ತಾರೆ. ಬಡವರಿಗೆ ಗ್ಯಾರಂಟಿ ಒಳ್ಳೆಯದೇ. ಯಾವ ಹೆಣ್ಣಿಗೆ ಸ್ವತಂತ್ರ ಇರ್ಲಿಲ್ಲವೊ ಅಂತಹ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ ಎಂದು ಶಕ್ತಿ ಯೋಜನೆಗೆ ಒಳ್ಳೆಯ ಯೋಜನೆಯೆಂದು ಮೆಚ್ಚುಗೆ ಸೂಚಿಸಿದರು.

ಕಾಂಗ್ರೆಸ್ ಸರ್ಕಾರ 5 ವರ್ಷಗಳ ಅವಧಿಗೆ ಆಡಳಿಯ ನಡೆಸುತ್ತಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ, ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತೆ ಎಂದು ಹೇಳಿದರು.ಆದರೆ ಇದು ಹಲವರಿಗೆ ಅರ್ಥ ಆಗದೆ ಕೋಡಿ ಮಠದ ಶ್ರೀಗಳ ಮಾತಿನ ಅರ್ಥವೇನು ಎಂದು ಈಗ ತಲೆ ಕೆಡಿಸಿಕೊಳ್ಳುವಂತಾಗಿದೆ.
ಕೋಡಿ ಮಠ ಶ್ರೀಗಳ ಹೇಳಿಕೆಯ ಮಾತನ್ನು ಅರ್ಥೈಸಿಕೊಳ್ಳುವುದಾದರೆ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯವಿದ್ದರೂ ಅದು ಹೊರಗೆ ಬರುವುದಿಲ್ಲ, ಅದೆಲ್ಲವೂ ಶಮನವಾಗುತ್ತದೆ ಎಂದು ಹೇಳಿದ್ದಾರ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ. ಇನ್ನು ವಿರೋಧ ಪಕ್ಷದಲ್ಲಿನ ಭಿನ್ನಮತ ಹೆಚ್ಚಾಗುತ್ತದೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರ ಎನ್ನುವ ಪ್ರಶ್ನೆಯೂ ಕಾಡುತ್ತದೆ.

Exit mobile version