ಮೂಲ್ಕಿ: ನಾಗರಹಾವಿಗೆ ಡಿಸೇಲ್ ಎರಚಿದಾತನಿಗೆ ಅನಾರೋಗ್ಯದಿಂದ ಅಸ್ಪತ್ರೆಯಲ್ಲಿ ದಾಖಲಾದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ.
ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ಕಳೆದವಾರ ನಾಗರ ಹಾವೊಂದು ಕಂಡು ಬಂದಿದ್ದು ಇದನ್ನು ಕಂಡ ಕಟ್ಟಡದ ಉತ್ತರ ಕರ್ನಾಟಕದ ಮೂಲದ ಕಾವಲುಗಾರ ಆ ನಾಗರ ಹಾವಿಗೆ ಡಿಸೇಲ್ ಎರಚಿದ.
ತನ್ನ ಮೈಗೆ ಡಿಸೇಲ್ ಬಿದ್ದ ಉರಿಯಿಂದ ನಾಗರ ಹಾವು ಒದ್ದಾಡತೊಡಗಿದಾಗ, ಸ್ಥಳೀಯರು ಇದನ್ನು ಕಂಡು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ತಿಳಿಸಿದ್ದು, ಯತೀಶ್ ಕಟೀಲು ಅವರು ಸ್ಥಳಕ್ಕೆ ಆಗಮಿಸಿ ಶ್ಯಾಂಪ್ ಮೂಲಕ ಅದನ್ನು ತೊಳೆದು ಸಹಜ ಸ್ಥಿತಿಗೆ ಬಂದ ನಂತರ ಕಾಡಿಗೆ ಬಿಟ್ಟಿದ್ದಾರೆ.
ಒಂದು ವಾರ ಕಳೆಯುವಷ್ಟರಲ್ಲಿ ಡಿಸೇಲ್ ಎರಚಿದ ಕಾರ್ಮಿಕ ಕೂಡ ನಾಗರ ಹಾವಿನಂತೆ ಮೈ ಉರಿರಿಯಿಂದ ಬಳಲಲು ಪ್ರಾರಂಬಿಸಿದ್ದು, ಈತನನ್ನು ಈತನ ಸಂಬಂಧಿಕರು ಉತ್ತರ ಕಾರ್ನಾಟಕ್ಕಕ್ಕೆ ಕರೆದೊಯ್ಯಿದಿದ್ದು ಇದೀಗ ಅಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ..