main logo

ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದ ಕಿಲಾಡಿ ಕಳ್ಳಿ ಅರೆಸ್ಟ್

ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದ ಕಿಲಾಡಿ ಕಳ್ಳಿ ಅರೆಸ್ಟ್

 

ಬೆಂಗಳೂರು: ಹೋಟೆಲ್, ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದ ಕಿಲಾಡಿ ಕಳ್ಳಿಯನ್ನು ಎಚ್‌ಎಎಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.  ಜೆಸ್ಸಿ ಅಗರ್ ವಾಲ್ ಎಂಬಾಕೆ ಕದಿಯುತ್ತಿದ್ದಳು.

 

ಹೋಟೆಲ್, ಪಿಜಿಗಳಲ್ಲಿ ರೂಂ ಪಡೆಯುವ ಈ ಖತರ್ನಾಕ್‌ ಲೇಡಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದಳು. ಹೋಟೆಲ್‌ ಹಾಗೂ ಪಿಜಿಯಲ್ಲಿರುವವರು ಟಿಫಿನ್, ಊಟಕ್ಕೆ ತೆರಳಿದ ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಲ್ಯಾಪ್‌ಟಾಪ್ ಕದ್ದು ಎಸ್ಕೇಪ್ ಆಗುತ್ತಿದ್ದಳು.

 

ಇನ್ನೂ ಈಕೆ ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಕೆಲಸ ಬಿಟ್ಟು ಕೋರಮಂಗಲ, ಇಂದಿರಾನಗರ, ಎಚ್‌ಎಎಲ್ ಸುತ್ತಮುತ್ತ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದಳು. ಸದ್ಯ ಲ್ಯಾಪ್‌ಟಾಪ್ ಕಳ್ಳಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಬಂಧಿತಳಿಂದ 10 ಲಕ್ಷ ರೂ. ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ಸೀಜ್ ಮಾಡಲಾಗಿದೆ.

 

ಜೆಸ್ಸಿ ಅಗರ್ ವಾಲ್ ಮೂಲತಃ ರಾಜಸ್ಥಾನದವಳು. ಈ ಮುಂಚೆ ಬ್ಯಾಂಕ್‌ವೊಂದರಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದಳು. ನಂತರ ಲ್ಯಾಪ್ ಟಾಪ್ ಕಳ್ಳತನಕ್ಕೆ ಇಳಿದಿದ್ದಳು. ಆಕೆಯನ್ನ ಬಂಧಿಸಿ 24 ಲ್ಯಾಪ್ ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!