ಉಪ್ಪಿನಂಗಡಿ: ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ನಿವಾಸಿ ಯೂಸುಫ್ ಅವರ ಪುತ್ರ ಮಹಮ್ಮದ್ ಇರ್ಫಾನ್ (18) ಹೃದಯಘಾತಕ್ಕೆ ಒಳಗಾಗಿ ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು, ಸೋಮವಾರ ಸಂಜೆ ಮೃತಪಟ್ಟಿದ್ದಾನೆ.
ಎ.ಸಿ. ಮೆಕಾನಿಕ್ ವ್ಯಾಸಂಗ ಮಾಡುತ್ತಿದ್ದ ಇರ್ಫಾನ್, ತಂದೆ ತಾಯಿ ಮೂವರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ.