ಕಾಸರಗೋಡು: ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ತಲೆ ವಿದ್ಯುತ್ ಕಂಬಕ್ಕೆ ಬಡಿದು ವಿದ್ಯಾರ್ಥಿ ಸಾವಿಗೀಡಾದ ಘಟನೆ ಚೆಮ್ನಾಡ್ನಲ್ಲಿ ನಡೆದಿದೆ. ಮನ್ನಿಪ್ಪಾಡಿ ಹೌಸಿಂಗ್ ಕಾಲನಿಯ ಸುನಿಲ್ ಕುಮಾರ್ ಅವರ ಪುತ್ರ ಮನ್ವಿತ್ (15) ಸಾವಿಗೀಡಾದ ವಿದ್ಯಾರ್ಥಿ
ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿರುವ ಮನ್ವಿತ್ ಬುಧವಾರ ಸಂಜೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ವಿದ್ಯುತ್ ಕಂಬಕ್ಕೆ ತಲೆ ಬಡಿದು ಸಾವು ಸಂಭವಿಸಿತು.
ಬಸ್ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು. ಗಂಭೀರ ಗಾಯಗೊಂಡ ಮನ್ವಿತ್ನನ್ನು ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.