ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್ಯಾಪ್ ಹೊಸದಾಗಿ ಪರಿಚಯಿಸಿರುವ ವಾಟ್ಸ್ಯಾಪ್ ಚಾನೆಲ್ ಗೆ (Whats App Channel) ಇದೀಗ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಾಮಾಜಿಕ, ರಾಜಕೀಯ, ಉದ್ಯಮ, ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರಗಳ ಧಿಗ್ಗಜರು ಈ ಹೊಸ ಫಿಚರ್ ಗೆ ತಮ್ಮ ಎಂಟ್ರಿ ಕೊಟ್ಟಿದ್ದು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ (Siddaramaiah) ಸಹ ಇದೀಗ ತಮ್ಮ ವಾಟ್ಸ್ಯಾಪ್ ಚಾನೆಲ್ ಪ್ರಾರಂಭಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಸೆ.13ರಂದೇ ಸಿಎಂ ಸಿದ್ದರಾಮಯ್ಯನವರು ವಾಟ್ಸ್ಯಾಪ್ ಚಾನೆಲ್ ಗೆ ಎಂಟ್ರಿ ಕೊಟ್ಟಿದ್ದು, ಈ ಕರಿತಾಗಿ ಅವರು ಈ ರೀತಿ ಮೆಸೇಜ್ ಮಾಡಿದ್ದಾರೆ..
ಈ ಮೂಲಕ ವಾಟ್ಸ್ಯಾಪ್ ಚಾನೆಲ್ ಪ್ರಾರಂಭಿಸಿದ ದೇಶದ ಪ್ರಥಮ ಮುಖ್ಯಮಂತ್ರಿ ಎಂಬ ಹೆಗ್ಗಳಿಗೆಕೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.
ಹಾಯ್, ನಾನು ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ.
ಇದು ನನ್ನ ಅಧಿಕೃತ ವಾಟ್ಸಾಪ್ ಚಾನೆಲ್.
ನನ್ನ ದೈನಂದಿನ ಕಾರ್ಯ ಚಟುವಟಿಕೆಗಳು, ನಮ್ಮ ಸರ್ಕಾರದ ಸಾಧನೆಗಳು ಹಾಗೂ ನೂತನ ಕಾರ್ಯಕ್ರಮಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯಲು Chief Minister of Karnataka ಗೆ Subscribe ಮಾಡಿ, ನನ್ನೊಂದಿಗೆ ನೇರ ಸಂಪರ್ಕದಲ್ಲಿರಿ.
ಈಗಾಗಲೇ 59 ಸಾವಿರ ಫಾಲೋವರ್ಸ್ ಗಳನ್ನು ಹೊಂದಿರುವ ಸಿಎಂ ವಾಟ್ಸ್ಯಾಪ್ ಚಾನೆಲ್, ಸರಕಾರದ ದೈನಂದಿನ ಕಾರ್ಯ ಚಟುವಟಿಕೆಗಳ ಅಪ್ಡೇಟ್ ಮತ್ತು ಸಾಧನೆಗಳನ್ನು ರಾಜ್ಯದ ಜನರಿಗೆ ತಿಳಿಸುವ ಕಾರ್ಯವನ್ನು ಮಾಡಲಿದೆ.
ಫಾಲೋ ಮಾಡೋದು ಹೇಗೆ?
ನಿಮ್ಮ ವಾಟ್ಸ್ಯಾಪನ್ನು ಮೊದಲಿಗೆ ಅಪ್ಡೆಟ್ ಮಾಡ್ಕೊಳ್ಳಿ. ಆಮೇಲೆ ಅಪ್ಡೇಟ್ ಆಪ್ಷನ್ ಗೆ ಹೋದ್ರೆ ಅಲ್ಲಿ ಚಾನೆಲ್ಸ್ ಆಯ್ಕೆ ಸಿಗ್ತದೆ, ಅಲ್ಲಿ ಫೈಂಡ್ ಚಾನೆಲ್ ನಲ್ಲಿ ನಿಮಗೆ ಚಾನೆಲ್ ಗಳನ್ನು ಫಾಲೋ ಮಾಡಲು ಸಾಧ್ಯವಾಗುತ್ತದೆ.
ಇಲ್ಲಿ ವಾಟ್ಸ್ಯಾಪ್ ಚಾನೆಲ್ ಹೊಂದಿರುವವರ ಹೆಸರು ಕಾಣಿಸಿಕೊಳ್ಳುತ್ತದೆ ಅದರ ಮುಂದಿರುವ ‘ಪ್ಲಸ್’ ಮೇಲೆ ಒತ್ತಿದರೆ ಆ ಚಾನೆಲ್ ನೀವು ಫಾಲೋ ಮಾಡಿದಂತಾಗುತ್ತದೆ.