main logo

ಕರ್ನಾಟಕ ಬಂದ್‌: ದಕ್ಷಿಣ ಕನ್ನಡದಲ್ಲಿ ಶಾಲಾ ಕಾಲೇಜಿಗೆ ರಜೆಯಿಲ್ಲ

ಕರ್ನಾಟಕ ಬಂದ್‌: ದಕ್ಷಿಣ ಕನ್ನಡದಲ್ಲಿ ಶಾಲಾ ಕಾಲೇಜಿಗೆ ರಜೆಯಿಲ್ಲ

ಮಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕನ್ನಡ ಸಂಘಟನೆಗಳು ರಾಜ್ಯಮಟ್ಟದಲ್ಲಿ ನಾಳೆ ಬಂದ್‌ ಗೆ ಕರೆ ನೀಡಿವೆ. ಆದರೆ ಕರಾವಳಿ ಭಾಗದಲ್ಲಿ ಈ ಬಂದ್‌ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಖಾಸಗಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ ಹೇಳಿಕೆ ನೀಡಿದ್ದು, ಬಂದ್ ಗೆ ಯಾವುದೇ ರೀತಿಯ ಸಹಕಾರ ನೀಡಲ್ಲ ಎಂದಿದ್ದಾರೆ.

ಎತ್ತಿನಹೊಳೆ ಹೋರಾಟಕ್ಕೆ ನಮ್ಮ ಜಿಲ್ಲೆಯವರಿಗೆ ಯಾರು ಬೆಂಬಲ ನೀಡಲಿಲ್ಲ. ತುಳು ಭಾಷೆಯನ್ನ ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿಸುವ ಹೋರಾಟಕ್ಕೂ ಬೆಂಬಲ ನೀಡಲಿಲ್ಲ. ರಾಜ್ಯದ ಬೇರೆ ಭಾಗದ ಯಾವುದೇ ಶಾಸಕರು ,ಜನರು, ಅಥವಾ ಯಾವುದೇ ಕನ್ನಡ ಪರ ಸಂಘಟನೆಗಳು ನಮ್ಮನ್ನು ಬೆಂಬಲಿಸಿಲ್ಲ. ದಕ್ಷಿಣ ಕನ್ನಡ ಉಡುಪಿ ಪರಿಸರ ಪೂರಕವಾಗಿದ್ದ ಜಿಲ್ಲೆ. ಎತ್ತಿನಹೊಳೆ ಯೋಜನೆ ಮೂಲಕ ಪರಿಸರ ನಾಶ ಮಾಡಿದ್ದಾರೆ. ಯಾವುದೇ ಸರಕಾರ ಬಂದರೂ ಆ ಯೋಜನೆಗೆ ಹಣ ಮೀಸಲಿಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಬರೆ ಎಳೆಯುತ್ತಿದ್ದಾರೆ. ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕರ್ನಾಟಕ ಬಂದ್ ಗೆ ಯಾವುದೇ ಬೆಂಬಲವಿಲ್ಲ. ಹಾಗಿ ಕಾವೇರಿ ವಿಚಾರದ ಬಂದ್ ಗೂ ನಮ್ಮ ಬೆಂಬಲವಿಲ್ಲ ಎಂದಿದ್ದಾರೆ.

ಇನ್ನು ದಕ್ಷಿಣ ಕನ್ನಡದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್‌ ಮಾಹಿತಿ ನೀಡಿದ್ದಾರೆ. ಜೊತೆಗೆ ಉಡುಪಿಯಲ್ಲಿಯೂ ಕೂಡ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ ಎಂದು ಮಾಹಿತಿ ಸಿಕ್ಕಿದೆ.

Related Articles

Leave a Reply

Your email address will not be published. Required fields are marked *

error: Content is protected !!