Site icon newsroomkannada.com

viral video: ಕಾರಿಂಜೇಶ್ವರ ರಾಮೋತ್ಸವದಲ್ಲಿ ಪ್ರತ್ಯಕ್ಷರಾದ ರಾಮ ದೂತರು

ಪ್ರಭು ಶ್ರೀರಾಮನು ಬಾಲ ರಾಮನಾಗಿ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಇದೇ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಳದಲ್ಲಿಯೂ ಕೂಡ ರಾಮೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಆ ವೇಳೆಯಲ್ಲಿ ಎಲ್ಲಿ ರಾಮನೋ ಅಲ್ಲಿ ಹನುಮ ಎಂಬಂತೆ, ಅಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ವಾನರ ಸೈನ್ಯವೂ ಕೂಡಾ ಭಾಗಿಯಾಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.

ಈ ವಿಡಿಯೋವನ್ನು @trollbogra ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ʼಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನದಲ್ಲಿ ನಡೆದ ರಾಮೋತ್ಸವದಲ್ಲಿ ಭಾಗಿಯಾದ ರಾಮದಾಸರುʼ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ಎಲ್ಲಿ ರಾಮನೋ ಅಲ್ಲಿ ಹನುಮ ಎಂಬಂತೆ ಕಾರಿಂಜೇಶ್ವರ ದೇವಾಲಯದಲ್ಲಿ ನಡೆದಂತಹ ರಾಮೋತ್ಸವ ಕಾರ್ಯಕ್ರಮದಲ್ಲಿ ವಾನರ ಸೈನ್ಯವೂ ಬಹಳ ಸಂಭ್ರಮದಿಂದ ಭಾಗಿಯಾಗಿರುವ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ ದೇವಾಲಯದ ಅಂಗಳದಲ್ಲಿ ಕುರ್ಚಿಯ ಮೇಲೆ ಶ್ರೀರಾಮ ದೇವರ ಫೋಟೋವನ್ನಿಟ್ಟು ಪೂಜಿಸಲಾಗಿತ್ತು. ಆ ಸಂದರ್ಭದಲ್ಲಿ ಎಲ್ಲಿ ರಾಮನೋ ಅಲ್ಲಿ ಹನುಮ ಎಂಬಂತೆ ಒಂದಷ್ಟು ವಾನರ ಸೈನ್ಯವೂ ಆಗಮಿಸಿ ರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದವು. ಅದರಲ್ಲಿ ವಿಶೇಷವೇನೆಂದರೆ, ಒಂದು ವಾನರ ಶ್ರೀ ರಾಮ ದೇವರ ಫೋಟೋವನ್ನೆ ನೋಡುತ್ತಾ ಮಂತ್ರಮುಗ್ಧವಾಗಿ ಕುಳಿತಿರುವಂತ ಸುಂದರ ದೃಶ್ಯವನ್ನು ಕಾಣಬಹುದು.

Exit mobile version