Site icon newsroomkannada.com

ತಾಯಿಯ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಮಗಳಿಗೆ ಶೇರ್ ಮಾಡಿದೆ ಕಂತ್ರಿ ; ನಿನ್ನ ನಗ್ನ ಫೋಟೋ ಸೆಂಡ್ ಮಾಡು ಎಂದು ಬ್ಲಾಕ್​ಮೇಲ್

ಬೆಂಗಳೂರು: ಅಶ್ಲೀಲವಾಗಿ ಎಡಿಟ್ ಮಾಡಿರುವ ತಾಯಿಯ ಫೋಟೋವನ್ನು ಮಗಳಿಗೆ ಕಳುಹಿಸಿ ಬೆದರಿಸಿ, ಆಕೆಯ ನಗ್ನ ಫೋಟೋಗಳನ್ನು ಪಡೆಯುತ್ತಿದ್ದ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.

 

ಈ ಬಗ್ಗೆ 18 ವರ್ಷ ವಯಸ್ಸಿನ ನೊಂದ ಯುವತಿ ನೀಡಿರುವ ದೂರಿನನ್ವಯ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

 

ಕಳೆದ ಸೆಪ್ಟೆಂಬರ್‌ನಲ್ಲಿ ಇನ್‌ಸ್ಟಾಗ್ರಾಂ ಖಾತೆಯೊಂದರಿಂದ ಅಶ್ಲೀಲವಾಗಿ ಎಡಿಟ್ ಮಾಡಲಾಗಿದ್ದ ನನ್ನ ತಾಯಿಯ ಫೋಟೋವನ್ನು ವಂಚಕ ಕಳುಹಿಸಿದ್ದ. ಬಳಿಕ ಬೆದರಿಕೆ ಹಾಕಿ, ನಿನ್ನ ನಗ್ನ ಫೋಟೋ ಕಳುಹಿಸದಿದ್ದರೆ ನಿನ್ನ ತಾಯಿಯ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ. ತಾಯಿಯ ಮರ್ಯಾದೆ ಹೋಗುತ್ತದೆ ಎಂದು ಅಂಜಿ ನನ್ನ ನಗ್ನ ಫೋಟೋಗಳನ್ನು ವಂಚಕನಿಗೆ ಕಳುಹಿಸಿದ್ದೆ. ನಂತರ ಅದೇ ಫೋಟೋವನ್ನು ಆರೋಪಿ ನನ್ನ ಸ್ನೇಹಿತರಿಗೆ, ಸೋದರ ಮಾವನಿಗೆ ಶೇರ್ ಮಾಡಿದ್ದಾನೆ. ಆರು ತಿಂಗಳುಗಳಿಂದ ಅಪರಿಚಿತ ವಂಚಕ ಕಿರುಕುಳ ನೀಡುತ್ತಿದ್ದಾನೆ’ ಎಂದು ಅಮೃತಹಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ

 

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದೂರುದಾರಳ ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಯುವತಿಯ ಕೆಲ ಪರಿಚಿತರು, ಸ್ನೇಹಿತರ ವಿಚಾರಣೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Exit mobile version