ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳ ಆಯೋಜನೆಯಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ( ಕಲರವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ(ನವೆಂಬರ್ 24) ಮೂರು ದಿನಗಳ ಕಾಲ ಕಂಬಳ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಆಗಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಳೆ(ನವೆಂಬರ್ 25) ಸಂಜೆ 3:30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಕಂಬಳ ಉದ್ಘಾಟನೆ ಮಾಡಲಿದ್ದಾರೆ. ನಿನ್ನೆ ಎರಡು ಜೋಡಿ ಕೋಣಗಳು ಮಾತ್ರ ಬಂದಿದ್ದು, ಕಂಬಳದ ಕೆರೆಗೆ ಪೂಜೆ ಸಲ್ಲಿಸಿ, ಕೋಣಗಳನ್ನ ಓಡಿಸಿ ರಿಹರ್ಸಲ್ ಮಾಡಲಾಯ್ತು. 200ಕ್ಕೂ ಹೆಚ್ಚು ಕೋಣಗಳು ಕಂಬಳದಲ್ಲಿ ಭಾಗವಹಿಸಲಿದ್ದು, 157 ಮೀಟರ್ ಉದ್ದ, 8 ಮೀಟರ್ ಅಗಲದ ರಾಜಮಾಹಾರಾಜ ಹೆಸರಿನ ಟ್ರ್ಯಾಕ್ನಲ್ಲಿ ಮಿಂಚು ಹರಿಸಲಿವೆ.