ಪುತ್ತೂರು: ಯುವ ವಿಜ್ಞಾನಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಪುತ್ತೂರಿನಿಂದ ವರದಿಯಾಗಿದೆ. ಆರ್ಯಾಪು ಕಲ್ಲರ್ಪೆಯ ಭರತ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಭರತ್ ಅವರು ಹೈದರಬಾದ್ ಡಿಆರ್ ಡಿಒನಲ್ಲಿ ಉದ್ಯೋಗದಲ್ಲಿದ್ದು, ಎರಡು ತಿಂಗಳ ಹಿಂದೆಯಷ್ಟೇ ಉದ್ಯೋಗ ಪಡೆದಿದ್ದರು. ಅವರು ಒಂದು ವಾರದ ಹಿಂದೆ ಮನೆಗೆ ಬಂದಿದ್ದರು. ಆದರೆ ಬೆಳಿಗ್ಗೆ ತೋಟದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ ಎನ್ನಲಾಗಿದೆ.ಭರತ್ ಅವರಿಗೆ ನಿನ್ನೆ ರಾತ್ರಿ ಕರೆ ಬಂದಿದ್ದು,ಆದರೆ ಬೆಳ್ಳಂಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.