ಮುಂಬೈ: ರಶ್ಮಿಕಾ ಮಂದಣ್ಣ ಅವರ ವಿಡಿಯೋವನ್ನು ವೈರಲ್ ಆದ ಬಳಿಕ, ಕತ್ರಿನಾ ಕೈಫ್ ಫೋಟೋವನ್ನು ಆಶ್ಲೀಲವಾಗಿ ಡೀಪ್ ಫೇಕ್ ಮಾಡಲಾಗಿತ್ತು. ಇದೀಗ ಬಾಲಿವುಡ್ ಮತ್ತೊಬ್ಬ ನಟಿಯ ಡೀಪ್ ಫೇಕ್ ವಿಡಿಯೋವನ್ನು ವೈರಲ್ ಮಾಡಲಾಗಿದೆ. ಬಿಟೌನ್ ಖ್ಯಾತ ನಟಿ ಕಾಜೋಲ್ ಅವರ ಮುಖವನ್ನು ಜೋಡಿಸಿ ವಿಡಿಯೋವೊಂದು ವೈರಲ್ ಮಾಡಲಾಗಿದೆ. ಕಾಜೋಲ್ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಎಐ ಮೂಲಕ ಡೀಪ್ ಫೇಕ್ ಮಾಡಿ ಹರಿದು ಬಿಡಲಾಗಿದೆ.