main logo

ಇದು ‘ಅಂದರ್ ಕಿ ಬಾತ್’!-ದೇಶದಲ್ಲಿ ಅಂಡರ್ ವೇರ್ ಮಾರಾಟದಲ್ಲಿ ಭಾರೀ ಕುಸಿತ!

ಇದು ‘ಅಂದರ್ ಕಿ ಬಾತ್’!-ದೇಶದಲ್ಲಿ ಅಂಡರ್ ವೇರ್ ಮಾರಾಟದಲ್ಲಿ ಭಾರೀ ಕುಸಿತ!

ನವದೆಹಲಿ: ದೇಶದಲ್ಲಿ ಒಳಉಡುಪುಗಳ ಖರೀದಿಯಲ್ಲಿ ಭಾರಿ ಇಳಿಕೆಯಾಗಿದ್ದು, ಪ್ರಮುಖ ಒಳ ಉಡುಪು ಕಂಪೆನಿಗಳಾದ ಜಾಕಿ, ಡಾಲರ್ ಮತ್ತು ರೂಪಾ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ ಎಂದು ವರದಿಯಾಗಿದೆ.

ಡಿಸೆಂಬರ್ 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಜಾಕಿ ಮತ್ತು ಲಕ್ಸ್ ಇಂಡಸ್ಟ್ರೀಸ್‌ನ ಮೂಲ ಕಂಪನಿಯಾದ ಪೇಜ್ ಇಂಡಸ್ಟ್ರೀಸ್‌ನ ಮಾರಾಟ ಕುಸಿದಿದ್ದು ,ರೂಪಾ & ಕಂ. ಪರಿಮಾಣದಲ್ಲಿ 52 ಪ್ರತಿಶತ ಕುಸಿತವನ್ನು ವರದಿ ಮಾಡಿದೆ.

ಸಾಲು ಸಾಲು ಹಬ್ಬ, ಮದುವೆ ಸಮಾರಂಭಗಳು ಬರುತ್ತಿದ್ದಂತೆ ಜನರು ಬಟ್ಟೆ ಮಳಿಗೆಗಳತ್ತ ಮುಖ ಮಾಡುವುದನ್ನು ಕಾಣಬಹುದು. ಆದರೆ, ಇತ್ತೀಚೆಗಷ್ಟೇ ಒಳ ಉಡುಪು ಕಂಪೆನಿಗಳ ತ್ರೈಮಾಸಿಕ ಅಂಕಿ ಅಂಶಗಳ ಪ್ರಕಾರ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಪಾರ್ಟಿ ವೇರ್ ನಿಂದ ನಾರ್ಮಲ್ ಮತ್ತು ಆಫೀಸ್ ವೇರ್ ವರೆಗೆ ಎಲ್ಲಾ ರೀತಿಯ ಬಟ್ಟೆ, ಶೂ, ಬ್ಯೂಟಿ ಉತ್ಪನ್ನಗಳನ್ನು ಜನರು ಖರೀದಿಸುತ್ತಿದ್ದಾರೆ. ಆದರೆ, ಒಳಉಡುಪು ಖರೀದಿಯಲ್ಲಿ ಭಾರೀ ಇಳಿಕೆ ಕಂಡಿದೆ. ಇದರಿಂದ ಜಾಕಿ, ಡಾಲರ್, ರೂಪಾ ಮುಂತಾದ ಒಳಉಡುಪು ಮಾರಾಟ ಕಂಪೆನಿಗಳ ಸೇಲ್ಸ್ ನಲ್ಲಿ ಭಾರೀ ಕುಸಿತ ಕಂಡುಬಂದಿದೆ. ಹಬ್ಬ ಹರಿದಿನಗಳಲ್ಲಿ ಶಾಪಿಂಗ್, ಫ್ಯಾಶನ್ ಬಟ್ಟೆಗಳ ಮಾರಾಟ ಹೆಚ್ಚಿದೆಯೇ ಹೊರತು ಒಳ ಉಡುಪುಗಳ ಮಾರಾಟ ಹೆಚ್ಚಿಲ್ಲ.

ಕಳೆದ ಒಂದೂವರೆ ವರ್ಷದಲ್ಲಿ ರೂಪಾ ಷೇರುಗಳು ಶೇ.52ಕ್ಕೂ ಹೆಚ್ಚು ಕುಸಿದಿವೆ. ಪೇಜ್ ಇಂಡಸ್ಟ್ರೀಸ್ ಪ್ರಮಾಣವು 11 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಷೇರಿನ ಬೆಲೆಯು ಐದು ಪ್ರತಿಶತದಷ್ಟು ಕಡಿಮೆಯಾಗಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಒಳಉಡುಪು ಖರೀದಿಯಲ್ಲಿ ಕೊಂಚ ಇಳಿಕೆಯಾಗಿದೆ.

ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಆದಾಯದಲ್ಲಿ ಶೇಕಡಾ 7.5 ರಷ್ಟು ಮತ್ತು ಪ್ರಮಾಣದಲ್ಲಿ ಶೇಕಡಾ 11.5 ಕುಸಿತವಾಗಿದೆ.ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಜನರು ಖರ್ಚು ಮಾಡಲು ಸಾಕಷ್ಟು ಹಣವನ್ನು ಹೊಂದಿಲ್ಲದಿರುವುದು ಮಾರಾಟದ ಕುಸಿತಕ್ಕೆ ಕಾರಣವಾಗಿರಬಹುದು.

ಅಲ್ಲದೇ ಭಾರತೀಯರು ಆನ್ ಲೈನ್ ಮಾರ್ಕೆಟಿಂಗ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆನ್‌ಲೈನ್ ಸ್ಟೋರ್‌ಗಳಲ್ಲಿ ಹೆಚ್ಚಿನ ರಿಯಾಯಿತಿಯನ್ನು ಪಡೆಯುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ.

ಭಾರತದಲ್ಲಿ ಒಳ ಉಡುಪು ಮಾರುಕಟ್ಟೆ:

ಯುರೋಮಾನಿಟರ್ ಇಂಟರ್‌ನ್ಯಾಶನಲ್ ವರದಿಯ ಪ್ರಕಾರ, ಭಾರತದಲ್ಲಿ ಒಳಉಡುಪು ಮಾರುಕಟ್ಟೆಯು $ 5.8 ಶತಕೋಟಿ ಅಂದರೆ ಭಾರತದ ರೂಪಾಯಿಗೆ ಹೋಲಿಸಿದರೆ 48,123 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!