main logo

ಜೈನರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದಂತಹ ಬಲಿಗೆಯ ದೊಡ್ಡಣ್ಣ ಶೆಟ್ಟಿ ಗುಹೆಯ ಬಗ್ಗೆ ಗೊತ್ತಿರದ ಇತಿಹಾಸ

ಜೈನರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದಂತಹ ಬಲಿಗೆಯ ದೊಡ್ಡಣ್ಣ ಶೆಟ್ಟಿ ಗುಹೆಯ ಬಗ್ಗೆ ಗೊತ್ತಿರದ ಇತಿಹಾಸ

ಒಂದಾನೊಂದು ಕಾಲದಲ್ಲಿ ಭಾರತ ಪುಣ್ಯ ಭೂಮಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಜೈನ ಧರ್ಮವು ಈಗ ಅಲ್ಪಸಂಖ್ಯಾತ ಧರ್ಮವಾಗಿ ನಿಂತಿದೆ. ಆದರೆ ಅದರ ಪ್ರಾಚೀನ ವೈಭವ ಅನೇಕ ಪುಣ್ಯಕ್ಷೇತ್ರಗಳಲ್ಲಿ ಉಳಿದುಕೊಂಡಿವೆ. ಅಂತಹ ಪುಣ್ಯಕ್ಷೇತ್ರಗಳಲ್ಲಿ ಹೊರನಾಡು ಸಮೀಪದ ಬಲಿಗೆಯು ಕೂಡ ಒಂದು. ಹೊರನಾಡಿನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಕ್ಯಾತನಮಕ್ಕಿ ಸಮೀಪದ ಬಲಿಗೆ ಪಾಶ್ವನಾಥ ಸ್ವಾಮಿ ಬಸದಿ ಮತ್ತು ಬಸದಿಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ದೊಡ್ಡಣ್ಣ ಶೆಟ್ಟಿ ಗುಹೆಯು ಒಂದು. ಸುಂದರವಾದ ಪರ್ವತಗಳಲ್ಲಿ ನಿಲ್ಲಿಸಿರುವ ಈ ತಾಣಗಳು ಮಹತ್ವದ ಇತಿಹಾಸಿಕ ಮತ್ತು ಆಧ್ಯಾತ್ಮಿಕತೆಯನ್ನು ಹೊಂದಿವೆ. ಲಿಖಿತ ದಾಖಲೆಗಳ ಕೊರತೆ ಇದ್ದರೂ ಸ್ಥಳೀಯ ಹಿರಿಯರು ಈ ಪವಿತ್ರ ಸ್ಥಳಕ್ಕೆ ನೂರಾರು ವರ್ಷಗಳ ಇತಿಹಾಸವನ್ನು ವಿವರಿಸುತ್ತಾರೆ. ಮೌಖಿಕ ಸಂಪ್ರದಾಯದ ಪ್ರಕಾರ ಸುಮಾರು 600 ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ಮೊಗಲ್ ಆಕ್ರಮಣದಿಂದಾಗಿ ಸಹೋದರರಾದ ಮಾಣಿಕ್ಯ ಶೆಟ್ಟಿ ಮತ್ತು ದೊಡ್ಡಣ್ಣ ಶೆಟ್ಟಿ ತಮ್ಮ ರಾಜ್ಯ ಮತ್ತು ಮತ್ತು ಜೀವಾಂಶಗಳನ್ನು ಕಾಪಾಡಿಕೊಳ್ಳಲು ಮೇಗುಂದದ ಜೈನ ಕೇಂದ್ರದಲ್ಲಿ ಆಶ್ರಯವನ್ನು ಪಡೆದರು. ಅವರು ತಂದಿದ್ದಂತ ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿಯ ವಿಗ್ರಹವನ್ನು ಭಕ್ತಿಯಿಂದ ಪ್ರತಿಷ್ಠಾಪಿಸಿದರು ಅದ್ಯಾಗೂ ಪೂಜೆಯ ಸ್ಥಳಗಳ ಬಗ್ಗೆ ಸಹೋದರರ ನಡುವೆ ವಿವಾದ ಹುಟ್ಟಿಕೊಂಡಿತು ದೊಡ್ಡಣ್ಣ ಶೆಟ್ಟಿಯವರು ಪದ್ಮಾವತಿ ದೇವಿಯ ವಿಗ್ರಹದೊಂದಿಗೆ ಹೊರಟು ಅಂತಿಮವಾಗಿ ಬಲಿಗೆಗೆ ಸಮೀಪದ ದೊಡ್ಡಣ್ಣ ಶೆಟ್ಟಿ ಗುಹೆಯಲ್ಲಿ ನೆಲೆಸಿದರು.

ದೊಡ್ಡಣ್ಣ ಶೆಟ್ಟಿ ಗುಹೆಯಿಂದ ಹೊರಟಂತಹ ದೊಡ್ಡಣ್ಣ ಶೆಟ್ಟಿ ಅವರಿಗೆ ಇಗಿನ ಬಲಿಗೆ ಬಸದಿ ಸ್ಥಳದಲ್ಲಿ ಹುಲಿ ಮತ್ತು ಹಸು ಒಟ್ಟಿಗೆ ಹಾಲನ್ನು ಕುಡಿಯುತ್ತಿರುವುದನ್ನು ಕಂಡ ದೊಡ್ಡಣ್ಣ ಶೆಟ್ಟಿ ಅವರು ಆ ಪ್ರದೇಶವನ್ನು ದೈವಿಕ ಸಂಕೇತವೆಂದು ಪರಿಗಣಿಸಿಕೊಂಡರು. ಮತ್ತು ಅಲ್ಲೇ ಮಹಾಮಾತೆ ಪದ್ಮಾವತಿ ಅಮ್ಮನವರ ವಿಗ್ರಹವನ್ನು ಇರಿಸಿದರು ಮತ್ತು ಅಲ್ಲೇ ನೆಲೆಸಿದರು ನಂತರದಲ್ಲಿ ಬಲಿಗೆ ಪ್ರದೇಶವು ವಸಾಹತು ಪ್ರದೇಶವಾಗಿ ಮಾರ್ಪಟ್ಟಿತು. ತಾಯಿ ಪದ್ಮಾವತಿ ದೊಡ್ಡ ಶೆಟ್ಟಿಗೆ ಸೂಚಿಸಿದ ಕನಸನ್ನು ಅನುಸರಿಸಿ ಜೈನ ದೇವಾಲಯವನ್ನು ಬಲಿಗೆಯಲ್ಲಿ ನಿರ್ಮಿಸಲಾಯಿತು ಮತ್ತು ಪದ್ಮಾವತಿ ಅಮ್ಮ ಮತ್ತು ಪಾಶ್ವನಾಥ ತೀರ್ಥಂಕರರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು

ವಾರ್ಷಿಕವಾಗಿ ಮೂಲ ಸ್ಥಾನವನ್ನು ಪ್ರತಿನಿಧಿಸುವ ದೊಡ್ಡಣ್ಣ ಶೆಟ್ಟಿ ಅಣೆಗೆ ದೇವಿಯ ವಿಗ್ರಹವನ್ನು ಕಾಲ್ನಡಿಗೆಯಲ್ಲಿ ಭವ್ಯ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಅಣೆ ಸಮಾರಾಧನೆಯನ್ನು ಮೂಲ ಮನೆತನಗಳಾದ ದೊಡ್ಡಮನೆ ಮೇಗಳಮನೆ ಅತ್ತಿಕೊಂಡ ಮನೆ ಅವರು ಪ್ರತಿ ವರ್ಷವೂ ಅಣೆ ಸಮರಾಜ್ಞೆಯನ್ನು ನಡೆಸುತ್ತಾ ಬಂದಿದ್ದಾರೆ. ಹಾಗೆಯೇ ಇಲ್ಲಿ ಜನ ಸೇರಿದಷ್ಟು ನೀರು ಹೆಚ್ಚಾಗಿ ಕಂಡುಬರುವುದು ವಿಶೇಷವಾಗಿದೆ. ಇಲ್ಲಿ ಏನೇ ಹರಕೆಯನ್ನು ಹೇಳಿಕೊಂಡರು ಈಡೇರದಂತು ಖಂಡಿತವಾಗಿದೆ.ಮನಸ್ಸಿನಲ್ಲಿ ಹರಕೆಯನ್ನು ಹೇಳಿಕೊಂಡು ಅಣೆ ಸಮಾರಾಧನೆ ನಡೆಸುತ್ತೇನೆ ಎಂದರೆ ಕಂಡಿತವಾಗಿ ಈಡೇರುತ್ತದೆ ಎಂದು ಸ್ಥಳೀಯರು ನಂಬಿದ್ದಾರೆ.

 

 

@Sujanjain Horanadu

team newsroomkannada

Related Articles

Leave a Reply

Your email address will not be published. Required fields are marked *

error: Content is protected !!