main logo

ಮಸೀದಿಗೆ ಮಂಗಳಾರತಿ ಮಾಡಿ, ಜೈ ಶ್ರೀರಾಮ ಅಂತ ಘೋಷಣೆ ಕೂಗಿದವರು ಅಂದರ್‌

ಮಸೀದಿಗೆ ಮಂಗಳಾರತಿ ಮಾಡಿ, ಜೈ ಶ್ರೀರಾಮ ಅಂತ ಘೋಷಣೆ ಕೂಗಿದವರು ಅಂದರ್‌

ಕೊಪ್ಪಳ: ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿಗೆ ಮಂಗಳಾರತಿ ಮಾಡಿ, ಜೈ ಶ್ರೀರಾಮ, ಜೈ ಶ್ರೀರಾಮ, ಜೈ ಭೋಲೋ ಭಾರತ ಮಾತಾಕಿ ಜೈ, ಗವಿ ಗಂಗಾಧರೇಶ್ವರ ಮಹಾರಾಜಕಿ ಜೈ ಅಂತಾ ಘೋಷಣೆ ಕೂಗಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರ ವಿರುದ್ಧ ಗಂಗಾವತಿ ನಗರ ಠಾಣೆ ಪೊಲೀಸರು, ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ ಆರೋಪದ ಅಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಶ್ರೀಕಾಂತ್, ಕುಮಾರ್ ಹೂಗಾರ್, ಚನ್ನಬಸವ ಹೂಗಾರ್, ಸಂಗಮೇಶ ಅಯೋಧ್ಯಾ, ಯಮನೂರ ಎಂಬವವರ ಮೇಲೆ ಪ್ರಕರಣ ದಾಖಲಾಗಿದೆ.

2023ರ ಸೆಪ್ಟೆಂಬರ್​ 28 ರಂದು ಗಾಂಗಾವತಿ ನಗರದಲ್ಲಿ ಹಿಂದೂ ಮಹಾ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆ ನಡೆದಿತ್ತು. ಮೆರವಣಿಗೆಯು ಸಾಯಂಕಾಲ 4 ಗಂಟೆಗೆ ಗಂಗಾವತಿ ಬಸ್ ನಿಲ್ದಾಣದಿಂದ ಪ್ರಾರಂಭವಾಗಿದ್ದು ಮೆರವಣಿಗೆ ಕೋರ್ಟಿ ಸರ್ಕಲ್, ಪಂಪಾನಗರ ಸರ್ಕಲ್, ಬಸವಣ್ಣ, ಸರ್ಕಲ್‌ ಮೂಲಕ ಸಾಗಿ ರಾತ್ರಿ 9: 45ರ ಸುಮಾರಿಗೆ ಗಾಂಧಿವೃತ್ತದ ಬಳಿ ಇದ್ದ ದೊಡ್ಡ ಜಾಮೀಯಾ ಮಸೀದಿಯ ಬಳಿ ಬಂದಿತ್ತು.

ಗಣೇಶ ಮೂರ್ತಿಯು ಮಸೀದಿಯ ಗೇಟ್​ನ ನೇರಕ್ಕೆ ಬಂದಾಗ ಮೆರವಣಿಗೆಯಲ್ಲಿದ್ದ ಶ್ರೀಕಾಂತ ಹೊಸಕೇರಿ, ಕುಮಾರ ಹೂಗಾರ, ಚನ್ನಬಸವ ಹೂಗಾರ, ಸಂಗಮೇಶ ಅಯೋಧ್ಯ ಹಾಗೂ ಇತರರು ಸೇರಿಕೊಂಡು ಗಲಭೆಯನ್ನು ಸೃಷ್ಟಿ ಮಾಡುವ ಉದ್ದೇಶದಿಂದಲೇ ಜೈ ಶ್ರೀರಾಮ, ಜೈ ಶ್ರೀರಾಮ, ಜೈ ಭೋಲೋ ಭಾರತ ಮಾತಾಕಿ ಜೈ, ಗವಿ ಗಂಗಾಧರೇಶ್ವರ ಮಹಾರಾಜಕಿ ಜೈ ಅಂತಾ ಘೋಷಣೆ ಕೂಗಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!