main logo

ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ವಜಾಗೊಳಿಸಿದ್ದು ತಪ್ಪು: ಸಿಎಂ ಇಬ್ರಾಹಿಂ

ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ವಜಾಗೊಳಿಸಿದ್ದು ತಪ್ಪು: ಸಿಎಂ ಇಬ್ರಾಹಿಂ

ಬೆಂಗಳೂರು: ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದನ್ನ ಪ್ರಶ್ನಿಸಿ ಕೋರ್ಟ್​ಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು,ಜೆಡಿಎಸ್​ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದು ತಪ್ಪು. ಹಾಗೂ ವಜಾಗೊಳಿಸಬೇಕೆಂದಿದ್ದರೆ ಸಭೆ ಕರೆದು 2/3 ಬೆಂಬಲದೊಂದಿಗೆ ಮಾಡಬೇಕು. ಯಾವುದೇ ನಿಯಮ ಪಾಲನೆ ಮಾಡದೇ ನನ್ನನ್ನು ಏಕಾಏಕಿ ಸ್ಥಾನದಿಂದ ತೆಗೆದು ಹಾಕಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಮೊದಲ ತಪ್ಪು. ನನ್ನನ್ನು ಅಮಾನತು ಮಾಡಿದ್ದು ಎರಡನೇ ತಪ್ಪು. ನೀವು ಬಿಜೆಪಿ ಜೊತೆ ಹೋಗೋದು ತಪ್ಪು ಅಂತ ಹೇಳಿದ್ದಕ್ಕೆ ಈ ಶಿಕ್ಷೆನಾ? ಮಗ ಕುಮಾರಸ್ವಾಮಿಯನ್ನು ತೆಗೆಯಬೇಕಿತ್ತು. ನಾನು ನಾಲ್ಕು ವರ್ಷಗಳಿಂದ ಇದ್ದ ಎಂಎಲ್ಸಿ ಸ್ಥಾನ ಬಿಟ್ಟು ಜೆಡಿಎಸ್​ಗೆ ಬಂದೆ. ಅದಕ್ಕೆ ಕೊಟ್ಟ ಶಿಕ್ಷೆನಾ ದೇವೇಗೌಡರೇ?. ಮಗನಿಗಾಗಿ ಇನ್ನು ಎಷ್ಟು ಜನರನ್ನು ಬಲಿ ಕೋಡ್ತೀರಾ? ಎಂದು ಕಿಡಿ ಕಾರಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!