Site icon newsroomkannada.com

ಕೇರಳ ದೇವಳಗಳ ಮೇಲೆ ದಾಳಿಗೆ ಐಸಿಸ್‌ ಸಂಚು, ಓರ್ವನ ಸೆರೆ

ನವದೆಹಲಿ: ಬೆಂಗಳೂರಿನಲ್ಲಿ ಬುಧವಾರ ಐವರು ಶಂಕಿತ ಉಗ್ರರು ಸೆರೆಯಾದ ಬೆನ್ನಲ್ಲೆ ತಮಿಳುನಾಡಿನ ಸತ್ಯಮಂಗಲಂ ಬಳಿಯ ಅಡಗುತಾಣದಿಂದ ಆಶಿಫ್ ಅಲಿಯಾಸ್ ಮತಿಲಕತ್ ಕೊಡೈಲ್ ಅಶ್ರಫ್ ಎಂಬಾತನನ್ನು ಗುರುವಾರ ಬಂಧಿಸಿದ್ದು, ಈತ ಕೇರಳ ಐಸಿಸ್‌ ಸಂಘಟನೆ ಪ್ರಮುಖ ಸದಸ್ಯನಾಗಿದ್ದು, ಕೇರಳದಲ್ಲಿ ದೇವಾಲಯಗಳ ಮೇಲೆ ದಾಳಿಗೆ ಯೋಜನೆ ರೂಪಿಸುತ್ತಿದ್ದ ಎಂದು ಎನ್‌ಐಎ ಹೇಳಿದೆ.

ಎನ್‌ಐಎ ತಂಡ ಕೇರಳ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ್ದು, ತ್ರಿಶೂರ್‌ನ ಮೂರು ಸ್ಥಳ ಮತ್ತು ಪಾಲಕ್ಕಾಡ್‌ನ ಒಂದು ಜಾಗದಲ್ಲಿ ದಾಳಿ ನಡೆಸಲಾಗಿದೆ. ಮಂಗಳವಾರ ಸತ್ಯಮಂಗಲದಲ್ಲಿ ಎನ್‌ಐಎ ಆಶಿಫ್‌ನನ್ನು ಬಂಧಿಸಿದ್ದು, ತ್ರಿಶೂರ್‌ ನ ಸೈಯದ್ ನಬೀಲ್ ಅಹಮ್ಮದ್, ಶಿಯಾಸ್ ಟಿಎಸ್ ನ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಅಲ್ಲದೆ ಪಾಲಕ್ಕಾಡ್‌ನ ರಯೀಸ್‌ ಮನೆಯಲ್ಲಿಯೂ ಶೋಧ ಕಾರ್ಯ ನಡೆದಿದೆ. ಈ ದಾಳಿ ವೇಳೆ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ತಂಡ ಕೇರಳದಲ್ಲಿದೇವಾಲಯಗಳು ಸೇರಿದಂತೆ ಕೆಲವು ಪ್ರಮುಖ ಸ್ಥಳಗಳಲ್ಲಿ ದಾಳಿಗೆ ಯೋಜನೆ ರೂಪಿಸಿದ್ದರು ಎಂದು ಎನ್‌ಐಎ ಹೇಳಿದೆ.

Exit mobile version