ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜು ಕಮ್ಯುನಿಟಿ ಮೆಡಿಸಿನ್ ವಿಭಾಗದಿಂದ ಇಂಡಿಯನ್ ಅಸೋಸಿಯೇಶನ್ ಆಫ್ ಪ್ರಿವೆಂಟಿವ್ ಸೋಶಿಯಲ್ ಮೆಡಿಸಿನ್ 51 ನೇ ರಾಷ್ಟ್ರೀಯ ಸಮ್ಮೇಳನವನ್ನು ಫೆ.8ರಿಂದ 10ರವರೆಗೆ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ. ಫೆ.6 ಮತ್ತು 7ರಂದು ಪೂರ್ವ ಸಮ್ಮೇಳನ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕೆಎಂಸಿ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಹಾಗೂ ಸಂಘಟನಾ ಅಧ್ಯಕ್ಷೆ ಡಾ.ರೇಖಾ ಟಿ ಎಂದು ವಿವರಿಸಿದರು. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜು ಡೀನ್ ಡಾ.ಬಿ.ಉನ್ನಿಕೃಷ್ಣನ್ ಅವರು ಸಮ್ಮೇಳನದ ವಿಷಯದ ಮಹತ್ವವನ್ನು ಹಂಚಿಕೊಂಡರು. 2030 ರ ವೇಳೆಗೆ ವಿವಿಧ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಸವಾಲುಗಳನ್ನು ಎದುರಿಸುವ ಗುರಿಯೊಂದಿಗೆ 2015 ರಲ್ಲಿ ವಿಶ್ವಸಂಸ್ಥೆ ಸ್ಥಾಪಿಸಿದ Sustainable Development Goals ಸವಾಲು ಎದುರಿಸಲು ಹಲವು ಕೊಡುಗೆ ನೀಡಿದೆ ಎಂದರು. ಫೆ.8ರಂದು ಸಾಯಂಕಾಲ 5.30ಕ್ಕೆ ಕಾರ್ಯಕ್ರಮದಲ್ಲಿ ಡಾ. ಆರ್ ಬಾಲಸುಬ್ರಹ್ಮಣ್ಯಂ(ಮೆಂಬರ್- ಹ್ಯೂಮನ್ ರಿಸೋರ್ಸಸ್, ಕ್ಯಪಾಸಿಟಿ ಬಿಲ್ಡಿಂಗ್ ಕಮಿಷನ್ಸ್ ಆಫ್ ಇಂಡಿಯಾ) ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು. ಸಮ್ಮೇಳನದಲ್ಲಿ ದೇಶ ಮತ್ತು ವಿದೇಶಗಳಿಂದ 1200 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಮತ್ತು ಐಸಿಎಂಆರ್, ಡಬ್ಲ್ಯುಂಚ್ ಮತ್ತು ಯುನಿಸೆಫ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಪ್ರಮುಖ ಚರ್ಚೆಗಳು, ಪ್ಯಾನಲ್ ಚರ್ಚೆಗಳು ಮತ್ತು ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ ಎಂದು ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ರಮೇಶ್ ಹೊಳ್ಳ ತಿಳಿಸಿದರು.\
ಕಾರ್ಯಕ್ರಮ ವಿವರ
ಇಂಡಿಯನ್ ಅಸೋಸಿಯೇಶನ್ ಆಫ್ ಪ್ರಿವೆಂಟಿವ್ ಸೋಶಿಯಲ್ ಮೆಡಿಸಿನ್ 51 ನೇ ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಫೆ.6 ಮತ್ತು 7ರಂದು ಪೂರ್ವ ಸಮ್ಮೇಳನ ಕಾರ್ಯಾಗಾರ (ಇಪ್ಸಾಕಾನ್ 2024)
ವನ್ನು ಬೆಳಗ್ಗೆ 9ರಿಂದ ಮಂಗಳೂರು ಕೆಂಎಂಸಿ ಆಸ್ಪತ್ರೆ ಎಂಇಯು ಎವಿ ಹಾಲ್ ನ ನಲ್ಲಿಆಯೋಜಿಸಲಾಗಿದೆ. ಡಾ. ಹರಿಣಿ ಎ ಚಕ್ಕೇರ ಮೇಯೋ ಕ್ಲಿನಿಕ್ ಕಾಲೇಜಿನ ಪ್ರೊಫೆಸರ್ ಆಫ್ ಮೆಡಿಸಿನ್ ಮುಖ್ಯ ಅತಿಥಿಗಳಾಗಿರುವರು.ಮಂಗಳೂರು ಮಾಹೆ ಕ್ಯಾಂಪಸ್ ವೈಸ್ ಚಾನ್ಸಲರ್ ಡಾ, ದಿಲೀಪ್ ಜಿ. ನಾಯಕ್ ಉಪಸ್ಥಿತರಿರುವರು.
ಫೆ.8ರಂದು ಸಾಯಂಕಾಲ 5.30ಕ್ಕೆ ಟಿಎಂ ಪೈ ಇಂಟರ್ ನ್ಯಾಷನಲ್ ಕನ್ಷೆನ್ಷನ್ ಸೆಂಟರ್ ನಲ್ಲಿ ಇಫ್ಸಂಕಾನ್ 2024 ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸದಸ್ಯ ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರು ಮುಖ್ಯ ಅತಿಥಿಗಳಾಗಿರುವರು. ಮಾಹೆ ವೈಸ್ ಚಾನ್ಸಲರ್ ಲೆ.ಜ. ಡಾ. ಎಂ.ಡಿ ವೆಂಕಟೇಶ್ ಅವರು ಉಪಸ್ಥಿತರಿರುವರು. ಡಾ. ಎ.ಎಂ ಕದ್ರಿ (ಐಎಪಿಎಸ್‌ಎಂ ರಾಷ್ಟ್ರೀಯ ಅಧ್ಯಕ್ಷರು), ಡಾ. ಪುರುಷೋತ್ತಮ್ ಗಿರಿ (ಐಎಪಿಎಸ್‌ಎಂ ಕಾರ್ಯದರ್ಶಿ) ಮಾಹೆ ಪ್ರೊ ಚಾನ್ಸಲರ್ ಡಾ. ಎಚ್ ಎಸ್. ಬಲ್ಲಾಳ್ ಮೊದಲಾದವರು ಪಾಲ್ಗೊಳ್ಳುವರು.